ಉಡುಪಿ : ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದೇವಾಲಯಗಳ ವಾಸ್ತು ತಜ್ಞರಾಗಿ ಮಾರ್ಗದರ್ಶನ ನೀಡಿರುವ ಖ್ಯಾತ ವಾಸ್ತು ತಜ್ಞ ಉಡುಪಿ ಗುಂಡಿ ಬೈಲು ಅವಧಾನಿ ಸುಬ್ರಹ್ಮಣ್ಯ ಭಟ್ ಅವರು ಇಂದು ಬೆಳಿಗ್ಗೆ ಸೀಮೆಯ ದೇವರ ಮಹಾತೋಭಾರ ಕೋಟೆಕೇರಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ವಾಸ್ತು ಪರಿಶೀಲನೆ ನಡೆಸಿದರು.

ಈ ಸಂದರ್ಭ ದೇವಳದ ಪ್ರಮುಖರು, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಊರ ಪ್ರಮುಖರು ಉಪಸ್ಥಿತರಿದ್ದರು.

