ಕೊಳಲಗಿರಿ : ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ಪವಿತ್ರ ಬಲಿಪೂಜೆಯ ಮೂಲಕ ಮೊದಲ್ಗೊಂಡಿತು.

ಬಲಿಪೂಜೆಯನ್ನು ವಂದನೀಯ ಸುನೀಲ್ ಡಿಸಿಲ್ವ (ಸಂತ ಅಂತೋನಿ ಚರ್ಚ್ ಕೊಳಲಗಿರಿ ಸಾಸ್ತಾನ) ಇವರೊಂದಿಗೆ ಸಹ ಯಾಜಕರಾಗಿ ಅತೀ ವಂದನೀಯ ಫರ್ಡಿನಂಡ್ ಗೊನ್ಸಾಲ್ವಿಸ್ (ಮಿಲಾಗ್ರಿಸ್ ಕಥೆದ್ರೇಲ್, ಕಲ್ಯಾಣ್ಪುರಾ) ಅವರೊಂದಿಗೆ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಚಾದೋ, ಚರ್ಚಿನ ದಿಯೊಕೊನ್ ಒಸ್ವಾಲ್ಡ್ ವಾಜ್, ವಾರಾಡೋದ ಹಾಗೂ ಇತರ ಧರ್ಮ ಗುರುಗಳು ಭಾಗವಹಿಸಿದ್ದರು. ನೂರಾರು ಭಕ್ತಾಧಿಗಳು ಭಕ್ತಿ ಕಾರ್ಯದಲ್ಲಿ ಭಾಗವಹಿಸಿ ದೇವರ ಕ್ರಪೆಗೆ ಪಾತ್ರರಾದರು. ವಿವಿಧ ಕಾರ್ಯಗಳಿಗೆ ಹಲವಾರು ಭಕ್ತಾಧಿಗಳು ಪ್ರಯೋಜಕತ್ವವನ್ನು ವಹಿಸಿಕೊಂಡಿದ್ದರು.
