Wednesday, March 4, 2026

spot_img

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದಾಖಲೆ ಹುಂಡಿ ಸಂಗ್ರಹ..

ಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಮಾಸಿಕ ಹುಂಡಿ ಕಾಣಿಕೆಯ ಲೆಕ್ಕಾಚಾರ ನಡೆಸಲಾಗಿದ್ದು, ದಾಖಲೆಯ ಮಟ್ಟದ 1,64,45,384 ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳು ಸೇರಿ ಒಟ್ಟು 32 ದಿನಗಳ ಅವಧಿಯಲ್ಲಿ ಸಂಗ್ರಹವಾದ ಈ ಹುಂಡಿ ಕಾಣಿಕೆಯಲ್ಲಿ ನಗದು ಮೊತ್ತದ ಜೊತೆಗೆ ಭಕ್ತರು ನೀಡಿದ 695 ಗ್ರಾಂ ಚಿನ್ನ ಹಾಗೂ 2 ಕೆ.ಜಿ 985 ಗ್ರಾಂ ಬೆಳ್ಳಿ ಕೂಡ ಸೇರಿದೆ. ಹಬ್ಬ–ಹರಿದಿನಗಳು ಹಾಗೂ ಪ್ರವಾಸಿಗರ ಸಂಖ್ಯೆಯ ಹೆಚ್ಚಳದಿಂದಾಗಿ ಈ ಬಾರಿ ಹುಂಡಿ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ದೇವಸ್ಥಾನ ಆಡಳಿತ ತಿಳಿಸಿದೆ.

ಹುಂಡಿ ಲೆಕ್ಕಾಚಾರವನ್ನು ನಿಗದಿತ ಮಾರ್ಗಸೂಚಿಗಳಂತೆ ದೇವಾಲಯದ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲಿ ಪಾರದರ್ಶಕವಾಗಿ ನಡೆಸಲಾಗಿದೆ. ಭಕ್ತರ ದೇಣಿಗೆಗಳು ದೇವಾಲಯದ ಅಭಿವೃದ್ಧಿ ಕಾರ್ಯಗಳು, ಅನ್ನದಾನ, ನಿತ್ಯ ಪೂಜೆ–ಪುನಸ್ಕಾರಗಳು ಹಾಗೂ ವಿವಿಧ ಧಾರ್ಮಿಕ ಸೇವೆಗಳಿಗೆ ಬಳಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles