ಕುಂದಾಪುರ: ಖಾಸಗಿ ಶಾಲೆಗಳ ಆರ್ಭಟದ ನಡೆಯುವ ಸರಕಾರಿ ಶಾಲೆಯ ಮಹತ್ವ ಸಾರುತ್ತ ಅಭಿವೃದ್ಧಿಯ ಪಥದಲ್ಲಿರುವ ಮಾದರಿ ಶಾಲೆಯಾಗಿ ರೂಪುಗೊಂಡಿದೆ, ಎಲ್ಲೆಡೆ ಕನ್ನಡ ಶಾಲೆಗಳ ಮುಚ್ಚುತ್ತಿರುವ ಆತಂಕಕಾರಿಯಾಗಿರುವ ಈ ಕಾಲದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡುವಲ್ಲಿ ಶಿಕ್ಷಕರು ನಿರಂತರ ಮಾರ್ಗದರ್ಶನ ನೀಡುತ್ತಿದ್ದು ಊರವರು ದಾನಿಗಳು ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಂಡಿದ್ದು.ಹರ್ಷ ವ್ಯಕ್ತಪಡಿಸಿ,ಒಮ್ಮೆವಿದ್ಯಾರ್ಥಿಯಾದರೆ ಜೀವನ ಪರ್ಯಂತ ಕಲಿಕೆ ಇರುತ್ತದೆ. ಮಕ್ಕಳು ಜೀವನದಲ್ಲಿ ಛಲದಿಂದ ನುಗ್ಗಬೇಕು. ಆಟದಲ್ಲೂ ಗೆಲುವಿಗೆ ಛಲದಿಂದ, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶ್ರೀಮತಿ ಗಿರಿಜಾ ಚಂದ್ರಶೇಖರ್ ಹೆಗ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊರ್ಗಿ ಶಾಲಾ ಶತಮಾನದ ಶತ ವೈಭವದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಶತಮಾನೋತ್ಸವದ ಸಂಭ್ರಮ ಆಚರಣೆಯ ಕಾರ್ಯಕ್ರಮವನ್ನು ಮಾಜಿ ಸಂಸದರು ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಮಾವತಿ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೊರ್ಗಿ, ಆನಂದ್ ಸಿ.ಕುಂದರ್. ಪ್ರವರ್ತಕರು ಗೀತಾನಂದ ಫೌಂಡೇಶನ್ ಕೋಟ, ಡಾ.ಕೆ.ವಿದ್ಯಾ ಕುಮಾರಿ ಜಿಲ್ಲಾಧಿಕಾರಿ ಉಡುಪಿ, ಗೌರೀಶ್ ಹೆಗ್ಡೆ ಕೊರ್ಗಿ ಗ್ರಾಮ ಪಂಚಾಯಿತಿ ಸದಸ್ಯ, ಶ್ರೀಮತಿ ಅಂಬಿಕಾ ಅಧ್ಯಕ್ಷರು ಶಾಲಾ ಅಭಿವೃದ್ಧಿ ಸಮಿತಿ, ರಂಜಿತ್ ಕುಮಾರ್ ಶೆಟ್ಟಿ ಉದ್ಯಮಿಗಳು ಗೌರವಾಧ್ಯಕ್ಷರು ಶತಮಾನೋತ್ಸವ ಸಮಿತಿ, ಸಂಕೇತ್ ಶೆಟ್ಟಿ ಅಧ್ಯಕ್ಷರು ಹಳೆ ವಿದ್ಯಾರ್ಥಿ ಸಂಘ ಕೊರ್ಗಿ, ವಿಟ್ಟಲ್ ಶೆಟ್ಟಿ ಕೊರ್ಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,, ಆನಂದ ಶೆಟ್ಟಿ ಸಮಾಜ ಸೇವಕರು ಆಜೂರು ಮನೆ ಕೊರ್ಗಿ, ಶಾಲಾ ಮುಖ್ಯೋಪಾಧ್ಯಾಯರದ ಜಯಕರ, ಮಾಸ್ಟರ್ ಸುಶಾಂತ್ ಪೂಜಾರಿ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ಶಾಲಾ ವಿದ್ಯಾರ್ಥಿಗಳು ಮಕ್ಕಳ ಪೋಷಕರು ಊರಿನ ನಾಗರಿಕರು ಉಪಸ್ಥಿತರಿದ್ದರು


