ಉಡುಪಿ : ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕೇಂದ್ರ ಸಮಿತಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಜನವಿರೋಧ ನೀತಿಗಳನ್ನು ವಿರೋಧಿಸಿ ಜುನ್ 20ರಿಂದ ದೇಶಾದ್ಯಂತ ಜನಸಾಮಾನ್ಯರ ಮಧ್ಯೆ ಪ್ರಚಾರ,ಜನಜಾಗೃತಿ ಸಭೆ, ಪ್ರತಿಭಟನೆ ನಡೆಸಲು ಕರೆ ನೀಡಿದ್ದು ಉಡುಪಿ ಜಿಲ್ಲೆಯಲ್ಲೂ ವ್ಯಾಪಕ ಪ್ರಚಾರನಡೆಸುತ್ತಿದೆ. ಕೇಂದ್ರ ಸರಕಾರದ ಕಾರ್ಮಿಕ ಕಾನೂನು ತಿದ್ದುಪಡಿಯಿಂದಾಗಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಬಡಕಾರ್ಮಿಕರು ಸ್ವಂತ ನಿವೇಶನ ಇಲ್ಲದೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಕಷ್ಟಪಡುತ್ತಿದ್ದಾರೆ. ದಿನ ನಿತ್ಯ ಬೆಲೆಏರಿಕೆಯಿಂದಾಗಿ ಕಾರ್ಮಿಕರು ಎಷ್ಟು ದುಡಿದರು ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ಬಗ್ಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ಕಡೆ ಕೇಂದ್ರ ಸರಕಾರವು ಸರಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ಬರುತ್ತಿದ್ದರು ರೈಲ್ವೆ, ವಿದ್ಯುತ್, ಬಂದರುಗಳು, ವಿಮಾನ ನಿಲ್ದಾಣ ಗಳನ್ನು ಖಾಸಗಿಯವರಿಗೆ ಮಾರಟ ಮಾಡುತ್ತಿದ್ದಾರೆ. ಈ ಸರಕಾರದ ಧೋರಣೆಗಳನ್ನು ಜನಸಾಮಾನ್ಯರಿಗೆ ತಿಳಿಸಲು ಸಿಪಿಐಎಮ್ ಪಕ್ಷವು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದುಪಕ್ಷದ ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್ .ಎಸ್.ಕಾಂಚನ್ ತಿಳಿಸಿದ್ದಾರೆ. ಭಾರತ ಕಮ್ಯೂನಿಸ್ಟ್ ಪಕ್ಷ ಮಾರ್ಕ್ಸ್ವಾದಿ (ಸಿಪಿಐಎಮ್)ಉಡುಪಿ ವಲಯ ಸಮಿತಿ ನೇತ್ರತ್ವದಲ್ಲಿ ಉಡುಪಿಯ ಇಂದಿರನಗರ, ಕುಕ್ಕಿಕಟ್ಟೆ, ದೊಡ್ಡಣಗುಡ್ಡೆ, ಈಶ್ವರನಗರ, ಕೆಳಾರ್ಕಳಬೆಟ್ಟು, ಮೂಡಬೆಟ್ಟು,ಲಕ್ಷೀನಗರ ಗರಡೆ ಪ್ರದೇಶದಲ್ಲಿ ಪ್ರಚಾರ ನಡೆಸಲಾಯಿತು.

ಉಡುಪಿಯಲ್ಲಿ ಇ.ಎಸ್.ಐ. Dispensary ಔಷಧ ಗಳು ಸರಿಯಾಗಿ ಸಿಗುತ್ತಿಲ್ಲ. ಅದನ್ನು ಕೂಡಲೇ ಸರಿಪಡಿಸಬೇಕು.ಇದರಿಂದ ಕಾರ್ಮಿಕರಿಗೆ ತುಂಬಾ ಸಹಾಯವಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ರಸ್ತೆ, ಚರಂಡಿ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕು. ಕೆಲವು ಕಡೆ ಮಳೆ ನೀರು ಸರಿಯಾಗಿ ಹರಿಯಲು ಸಾಧ್ಯವಾಗದೆ ಗೋಡೆ ಕುಸಿತ, ಮಣ್ಣು ಕುಸಿತ ಸಂಭವಿಸುತ್ತಿದೆ. ಜನರ ಬಳಕೆಗೆ ಪೂರಕವಾಗಿ ಮುರುಡೇಶ್ವರ-ಬೆಂಗಳೂರು ಹಗಲು ರೈಲನ್ನು ರಾತ್ರಿ ಕೂಡ ಓಡಿಸಬೇಕು ಇದರಿಂದ ಸಾಮಾನ್ಯ ಜನರಿಗೆ ತುಂಬಾ ಅನುಕುಲವಾಗಲಿದೆ. ಈ ಎಲ್ಲಾ ಬೇಡಿಕೆಗಳನ್ನು ಇಟ್ಟು ತೆಂಕನಿಡಿಯೂರು ಪಂಚಾಯತ್ ಮೂಲಕ ಪ್ರಧಾನಮಂತ್ರಿ ಯವರಿಗೆ ಮನವಿಯನ್ನು ನೀಡಲಾಯಿತು. ನೀಯೋಗದಲ್ಲಿ ಪಕ್ಷದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯರಾದ ಉಮೇಶ್ ಕುಂದರ್, ಉಡುಪಿ ವಲಯ ಸಮಿತಿ ಸದಸ್ಯರಾದ ನಳಿನಿ.ಎಸ್, ಪಕ್ಷದ ಮುಖಂಡರಾದ ಶಾರದ, ಲಕ್ಷೀ,ಕಮಲ, ಲಕ್ಷೀ ಎಸ್ ಉಪಸ್ಥಿತರಿದ್ದರು.