ಉಡುಪಿ : ಪಲಿಮಾರು ಮಠದ ಶ್ರೀ ಯೋಗವಿದ್ಯಾಪೀಠದ ಘಟಿಕೋತ್ಸವ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಈ ಬಾರಿಯ ಯಕ್ಷ ವಿದ್ಯಾಮಾನ್ಯ ಪ್ರಶಸ್ತಿಯನ್ನು ತೆಂಕುತಿಟ್ಟಿನ ಶ್ರೇಷ್ಠ ಕಲಾವಿದರಾದ ಕೆ. ಗೋವಿಂದ ಭಟ್ ಇವರಿಗೆ ಪ್ರದಾನ ಮಾಡಿದರು. ಹಿರಿಯ ವಿದ್ವಾಂಸ ಪಂಜ ಭಾಸ್ಕರ ಭಟ್ ಅಭಿನಂದೆನಯ
ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಕಾಣಿಯೂರು, ಸುಬ್ರಹ್ಮಣ್ಯ, ಸೋದೆ ಮತ್ತು ಪಲಿಮಾರಿನ ಕಿರಿಯ ಶೀಪಾದರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು. 50,000/- ನಿಧಿಯನ್ನೊಳಗೊಂಡಿರುವ ಈ ಪ್ರಶಸ್ತಿಯನ್ನು ಪೂಜ್ಯ ಪಲಿಮಾರು ಮಠಾಧೀಶರು ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಪರಂಪರೆಯನ್ನು ಕಳೆದ ಒಂದು ದಶಕದಿAದ ಮುಂದುವರಿಸಿಕೊಂಡು ಬಂದಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪಾಕ ತಜ್ಞ ಕೆ. ಶ್ರೀಧರ ಭಟ್, ವೈದಿಕ ವಿದ್ವಾನ್ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯ ಇವರಿಗೆ ಶ್ರೀ ಮಠದ ಪ್ರಶಸ್ತಿ ನೀಡಿ ಗೌರವಿಸಿದರು.