ಉಡುಪಿ : ಉಡುಪಿಯ ಎಕೆಎಂಎಸ್ ಹೆಸರಿನ ಬಸ್ ಮಾಲೀಕನನ್ನು, ಆತನ ಬಸ್ ನಲ್ಲಿ ಚಾಲಕರಾಗಿದ್ದ ಮೂವರು ಸೇರಿ ಹಾಡು ಹಗಲೆ ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕೊಡವೂರಿನ ಮನೆಯೊಂದರಲ್ಲಿ ನಡೆದಿದೆ. ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆಯಾದಾತ, ಅಬ್ದುಲ್ ಶುಕೂರು, ಫೈಝಲ್ ಹಾಗೂ ಶರೀಫ್ ಶರಣಾದ ಆರೋಪಿಗಳು.

ಮಣಿಪಾಲ ಸಮೀಪದ ಆತ್ರಾಡಿಯ ನಿವಾಸಿಯಾಗಿದ್ದ ಸೈಫುದ್ದೀನ್, ಉಡುಪಿಯ ಕೊಡವೂರು ಸಾಲ್ಮರದಲ್ಲಿನ ಎರಡನೇ ಮನೆಯಲ್ಲಿ ಕೊಲೆಯಾಗಿದ್ದು, ಬೆಳಗಿನ ಜಾವ 10ರಿಂದ 11 ಗಂಟೆಯ ನಡುವೆ ದುಷ್ಕೃತ್ಯ ನಡೆದಿದೆ ಎನ್ನಲಾಗಿದೆ. ದೇಹದ ಹಲವೆಡೆ ಇರಿದ ಗಾಯಗಳಾಗಿದ್ದು, ಮೂವರು ದುಷ್ಕೃತ್ಯ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿರುವ ರೀತಿಯಲ್ಲಿ ಕೊಲೆ ನಡೆದಿದೆ. ಆರೋಪಿಗಳು ಎಕೆಎಂಎಸ್ ಖಾಸಗಿ ಬಸ್ ಸಂಸ್ಥೆಯಲ್ಲಿ ಉದ್ಯೋಗಿಗಳು ಎನ್ನುವ ಶಂಕೆ ವ್ಯಕ್ತವಾಗಿತ್ತು, ಮಲ್ಪೆಯ ಮನೆಯಲ್ಲಿ ಒಬ್ಬರೇ ಇದ್ದಾಗ ತಲವಾರ ಮತ್ತು ಚಾಕು ವಿನಿಂದ ಅಟ್ಯಾಕ್ ನಡೆದಿತ್ತು, ಕೊಲೆಗೆ ಕಾರಣ ಹಿಂದಿನ ಕೊಲೆಗಳಿಗೆ ಪ್ರತಿಕಾರವೇ ಎನ್ನುವುದು ತನಿಖೆಯ ಬಳಿಕ ಹೊರ ಬರಲಿದೆ.

ಸೈಫುದ್ದೀನ್ 18 ಕ್ರಿಮಿನಲ್ ಕೇಸುಗಳಿದ್ದು, ಹಿರಿಯಡ್ಕ ಠಾಣೆ ಮತ್ತು ಉಡುಪಿ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಇನ್ನು ಎರಡು ಕೊಲೆ ಪ್ರಕರಣದಲ್ಲಿ ಸೈಫುದ್ದೀನ್ ಆರೋಪಿಯಾಗಿದ್ದ. ಮಲ್ಪೆ ಪೊಲೀಸ್ ರು ಕೊಡವೂರಿನ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು, ಘಟನಾಸ್ಥಳಕ್ಕೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭೇಟಿ ನೀಡಿ, ಆತನ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಮೂವರು ಆರೋಪಿಗಳು ಕೊಲೆ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

ಸಂಜೆ ವೇಳೆಗೆ ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಆರೋಪಿಗಳನ್ನು ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸೈಫುದ್ದೀನ್ ಮಾಲಕತ್ವದ ಎಕೆಎಂಎಸ್ ಬಸ್ ಚಾಲಕ ಅಬ್ದುಲ್ ಶುಕೂರು, ಫೈಝಲ್ ಹಾಗೂ ಶರೀಫ್ ಶರಣಾದ ಆರೋಪಿಗಳು. ಸದ್ಯ ಶರಣಾಗಿರುವ ಮೂವರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದ್ದು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



