ಕುಂದಾಪುರ : ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿಯು ಕಾಲೇಜಿನ ಕ್ರೀಡಾoಗಣದಲ್ಲಿ ನಡೆಯಿತು. ಕುಸ್ತಿ ಪಂದ್ಯಾಟವು ಬಾಲಕರ ವಿಭಾಗದ ಫ್ರಿ ಸ್ಟೆಲ್ ಹಾಗೂ ಗ್ರಿಕೋ ರೋಮನ್ ಮತ್ತು ಬಾಲಕಿಯರ ವಿಭಾಗ ದಲ್ಲಿ ನಡೆಯಿತು. ಈ ಪಂದ್ಯಾಟದಲ್ಲಿ ಜನತಾ ಪದವಿ ಪೂರ್ವ ಕಾಲೇಜಿನ 14 ವಿದ್ಯಾರ್ಥಿಗಳು ಚಿನ್ನದ ಪದಕ 2 ವಿದ್ಯಾರ್ಥಿಗಳು ಬೆಳ್ಳಿಯ ಪದಕ 8 ವಿದ್ಯಾರ್ಥಿಗಳು ಕಂಚಿನ ಪದಕ ಪಡೆದು ಸತತವಾಗಿ 4ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಕೊಂಡರು.

ವಿದ್ಯಾರ್ಥಿಗಳಾದ ರತ್ವಿಕ್, ಸೌಲತ್, ಪನ್ನಗ, ಶಶಾಂಕ್, ಮಂದಿರ್ ಶೆಟ್ಟಿ, ಸ್ವಸ್ತಿಕ್, ಕಿಶನ್, ಆದಿತ್ಯ, ಪ್ರಣಿತ್, ಗಾಯತ್ರಿ, ಆರ್ಯನ್, ವಿಜಯ್, ಮಂಥನ್, ಸೃಜನ್ ಇವರು ಚಿನ್ನದ ಪದಕ ಪಡೆಯುದರ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇಂದಿನ ಬದಲಾಗುತ್ತಿರುವ ಸಮಾಜದಲ್ಲಿ ಎಲ್ಲ ವಿಭಾಗ ದಲ್ಲಿಯೂ ಮಕ್ಕಳಿಗೆ ಮುಕ್ತ ಅವಕಾಶ ಇರುವುದರಿಂದ ಕೇವಲ ಇಂಜಿನಿಯರ್, ಡಾಕ್ಟರ್ ಮಾತ್ರವಲ್ಲದೆ ಕ್ರೀಡೆಗೂ ಈ ದೇಶದಲ್ಲಿ ಸಮನ ಅವಕಾಶ ಸಿಗುತ್ತಿದೆ ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನತಾ ಪದವಿ ಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಸಂಚಲನ ಉಂಟು ಮಾಡಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಜನತಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗಣೇಶ್ ಮೊಗವೀರ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು 160 ವಿದ್ಯಾರ್ಥಿಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದರು.
