Thursday, October 23, 2025

spot_img

ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ನಿಂದ ಶವಗಾರ ಸ್ಟೋರೇಜ್ ಯೂನಿಟ್ ಹಸ್ತಾಂತರ

ಕುಂದಾಪುರ: ಕುಂದಾಪುರ ಶಾಸಕರ ಶಿಫಾರಸ್ಸಿನ ಮೇರೆಗೆ ಕರ್ಣಾಟಕ.ಬ್ಯಾಂಕ್ ನವರು ಸಿ.ಎಸ್.ಆರ್. ನಿಧಿಯಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಹಳ ಸುಸಜ್ಜಿತವಾದ 4 ಮೃತ ದೇಹವನ್ನು ಇರಿಸುವಂತ ಶವಗಾರ ಸ್ಟೋರೇಜ್ ಯೂನಿಟ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಶವಗಾರ ಸ್ಟೋರೇಜ್ ಯೂನಿಟ್ ಹಸ್ತಾಂತರದ ಕಾರ್ಯಕ್ರಮವನ್ನು  ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ, ಕರ್ಣಾಟಕ ಬ್ಯಾಂಕ್ ನವರ ಈ ಉತ್ತಮವಾದ ಕಾರ್ಯವೈಖರಿಗೆ ಶಾಸಕರು ಶ್ಲಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಚಂದ್ರ ಮರಕಾಲ ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್, ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಕರ್ಣಾಟಕ ಮೆನೇಜರ್ ರಾಘವೇಂದ್ರ, ಶ್ರೀಡಿಸ್ಟ್ರಿಬ್ಯೂಟರ್ ಅಶೋಕ್ ಉಪಸ್ಥಿತರಿದ್ದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನಾಗೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಶವಗಾರ ಸ್ಟೋರೇಜ್ ಯೂನಿಟ್ 2 ಮಾತ್ರ ಸರಿಯಾಗಿದ್ದು ಇದರಿಂದಾಗಿ ತಾಲೂಕಿನ ಜನತೆಗೆ ಮೃತ ದೇಹವನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲದೆ ಪರೆದಾಡುವಂತಾಗಿತ್ತು. ಈ ಹಿನ್ನಲೆ ಶಾಸಕರು ಕರ್ಣಾಟಕ ಬ್ಯಾಂಕ್‌ ನೆರವಿನ ಮೂಲಕ ಶವಗಾರ ಸ್ಟೋರೇಜ್ ಯೂನಿಟ್ ಅಳವಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles