ಕುಂದಾಪುರ: ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ವತಿಯಿಂದ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ 11ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ವಿಕಸಿತ ಭಾರತ ಸಂಕಲ್ಪದ ಜಿಲ್ಲಾ ಸಂಚಾಲಕರಾದ ರಾಜೇಶ್ ಕಾವೇರಿಯವರು ವಿಶ್ವ ಯೋಗ ಪರಿಸರ ದಿನಾಚರಣೆ ಅಂಗವಾಗಿ ಗಿಡಕ್ಕೆ ನೀರು ಹಾಕುವುದರ ಮುಖಿನ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಯೋಗವು ಜನರಿಗೆ ಆಂತರಿಕ ಶಕ್ತಿಯ ಮೂಲವಾಗಿದೆ ಮತ್ತು ನಕರಾತ್ಮಕತೆಯನ್ನು ಸೃಜನಶೀಲತೆಗೆ ಪರಿವರ್ತಿಸುವ ಮಾಧ್ಯಮವಾಗಿದೆ ಎಂದರು.

ವಿಕಸಿತ ಭಾರತ ಸಂಕಲ್ಪದ ಕಾರ್ಯಕ್ರಮದ ಕುಂದಾಪುರ ಮಂಡಲದ ಸಂಚಾಲಕರಾದ ಸುನಿಲ್ ಶೆಟ್ಟಿ ಹೇರಿಕುದ್ರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ತರಬೇತಿಯನ್ನು ಬಿಜೆಪಿ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ರಾಜ್ಯ ಸಮಿತಿಯ ಸದಸ್ಯರು ಹಾಗೂ ಶ್ರೀ ಪತಂಜಲಿ ಯೋಗ ಸಮಿತಿಯ ಮುಖ್ಯ ಶಿಕ್ಷಕರಾದ ವಿವೇಕ್ ಪೈ ನೇತೃತ್ವದಲ್ಲಿ ಯೋಗಪಟುಗಳಿಗೆ ಯೋಗ ಅಭ್ಯಾಸವನ್ನು ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಓಬಿಸಿ ಮರ್ಚಾದ ಅಧ್ಯಕ್ಷ ಸುರೇಂದ್ರ ಕಾಂಚನ್, ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರೋಹಿಣಿ ಪೈ ಹಾಗೂ ಯೋಗ ಅಭಿಮಾನಿಗಳು ಉಪಸ್ಥಿತರಿದ್ದರು.



