ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಕೊಟೇಶ್ವರ ಗ್ರಾಮದ ನಿವಾಸಿ ಪೂಜಾ ಕಿಣಿ ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕಳವುಗೈದ ಘಟನೆ ನಡೆದಿದೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ

ಪೂಜಾ ಕಿಣಿ (43) ಅವರು ಬಿದ್ಕಲ್ ಕಟ್ಟೆ ಕೆಪಿಎಸ್ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದು, ಇವರ ಕೋಟೇಶ್ವರ ಮನೆಯಲ್ಲಿ ಇರುವ ಗೊದ್ರೇಜ್ ಲಾಕರ್ನಲ್ಲಿ ರಿದ್ಧಿ ಎಂಬ ಹೆಸರಿನ ಚಿನ್ನದ ಬ್ರಾಸ್ ಲೈಟ್, ಪವನ ಸರ, ಕೆಂಪು ಕಲ್ಲು ಮುತ್ತಿನ ಸೂರ್ಯಪೆಂಡೆಂಟ್, ಸಿಂಗಲ್ ಸ್ಕ್ರೂ ಬಳೆ, ಜುಮ್ಕಿ ಬಳೆ, ಕರಿಮಣಿ ನೆಕ್ಲೆಸ್ ,ಗೋಲ್ಡನ್ ಸಟೋನ್ ಪೆಂಡೆಂಟ್, ವೆಂಕಟರಮಣ ಪೆಂಡೆಂಟ್,ಡಿ ಸಿ ಚೈನ್ ,ನೆಕ್ಲೆಸ್ ,ಹಸಿರು ಗುಲಾಬಿ ಕಲ್ಲಿನ ಪೆಂಡೆಂಟ್, ಸಣ್ಣ ಹವಳದ ಸರ, ವಜ್ರದ ಮೂಗುಬೊಟ್ಟು,-2 ಇವುಗಳನ್ನು ಮನೆಯ ಗೊದ್ರೇಜ್ ನಲ್ಲಿ ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದರು.

ಅದರೆ ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗುವಾಗ ಕೆಲವು ಆಭರಣಗಳು ಕಾಣೆಯಾಗಿರುವುದು ಮೊದಲು ಗಮನಕ್ಕೆ ಬಂದರೂ, ಅವು ಲಾಕರ್ನಲ್ಲಿ ಇರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು. ಆದರೆ ಜೂನ್ 26ರಂದು ಮತ್ತೊಮ್ಮೆ ಲಾಕರ್ ಪರಿಶೀಲಿಸಿದಾಗ ಹಲವು ಮೌಲ್ಯವಾದ ಆಭರಣಗಳು ಸಂಪೂರ್ಣವಾಗಿ ಕಳವಾಗಿರುವುದು ಬಹಿರಂಗವಾಗಿದೆ. ಸದ್ಯ ಸುಮಾರು 23 ಪವನ್ ಚಿನ್ನ, ಅಂದಾಜು ಮೌಲ್ಯ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿದ್ದು, ಮನೆಯಲ್ಲಿ ಬೀಗ ಹಾಕಿ ಬೀಗವನ್ನೇ ಅಲ್ಲಿ ಇಡಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಯಾರೋ ಮನೆಗೆ ಪ್ರವೇಶಿಸಿ ಆಭರಣಗಳನ್ನು ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ. ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



