Monday, March 2, 2026

spot_img

ಕೀರ್ತಿ ತಂದ ಯುವ ಸಂಶೋಧಕ: ಉಡುಪಿ ಯುವಕನಿಗೆ ಇಂಗ್ಲೆಂಡ್‌ನ ಬಾತ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕು ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಹರೀಶ್ ಶೆಟ್ಟಿ ಬಂಡ್ಸಾಲೆ ಅವರು ಇಂಗ್ಲೆಂಡ್‌ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿ.ಹೆಚ್.ಡಿ ಪದವಿ ಗಳಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಧನೆ ಮೆರೆದಿದ್ದಾರೆ. “ಹೋಮ್‌ ವರ್ಕ್‌ ಡೈನಾಮಿಕ್ಸ್‌ ಇನ್‌ ದಿ ಮಾರ್ಜಿನ್‌ ಆಫ್‌ ದಿ ಗ್ಲೋಬಲ್‌ ಸೌತ್” ಎಂಬ ವಿಷಯದ ಬಗ್ಗೆ ಆಳವಾದ ಸಂಶೋಧನೆ ನಡೆಸಿ, ಯಾವುದೇ ತಿದ್ದುಪಡಿ ಇಲ್ಲದೆ ಮೊದಲ ಹಂತದಲ್ಲಿಯೇ ಉತ್ತೀರ್ಣರಾಗಿ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ವಿಶೇಷ.

 ಹರೀಶ್ ಶೆಟ್ಟಿ ಬಂಡ್ಸಾಲೆ ಅವರು ಹಾರಾಡಿ ಗ್ರಾಮದ ಕೆಳಬಣಸಾಲೆ ಮನೆಯ ಶ್ರೀಮತಿ ರತ್ನಾವತಿ ಶೆಟ್ಟಿ ಹಾಗೂ ಹಳುವಳ್ಳಿ–ಕೋಂಟಿಬೈಲಿನ ಲಕ್ಷಣ ಶೆಟ್ಟಿಯವರ ಪುತ್ರರು. ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಾರಾಡಿ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬ್ರಹ್ಮಾವರದ ಎಸ್.ಎಂ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದಾರೆ. ನಂತರ ಹಾರಾಡಿ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ಬಿಎಸ್‌ ಡಬ್ಲ್ಯೂ ಮಂಗಳೂರಿನ ಡಾ. ಎಂ.ವಿ. ಶೆಟ್ಟಿ ಕಾಲೇಜಿನಲ್ಲಿ ಎಂಎಸ್ಡಬ್ಲ್ಯೂ ಪೂರ್ಣಗೊಳಿಸಿದ್ದಾರೆ. ಆ ಬಳಿಕ ಭಾರತದಲ್ಲಿಯೇ ಅತ್ಯುನ್ನತ ಮ್ಯಾನೇಜ್‌ಮೆಂಟ್ ಸಂಸ್ಥೆಗಳಲ್ಲಿೊಂದಾದ ಐಐಎಂ ಅಹಮದಾಬಾದ್ನಲ್ಲಿ ಪಿ.ಹೆಚ್.ಡಿ ಪ್ರಾರಂಭಿಸಿ, ಬಳಿಕ ಯುಕೆಯ ಬಾತ್ ವಿಶ್ವವಿದ್ಯಾಲಯದಿಂದ ಸ್ಕಾಲರ್ಶಿಪ್ ಪಡೆದು ಕಟ್ಟಡ ಕಾರ್ಮಿಕರ ಬದುಕು, ಕೆಲಸದ ವಾತಾವರಣ ಹಾಗೂ ಸಾಮಾಜಿಕ–ಆರ್ಥಿಕ ಅಂಶಗಳ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದಿರುವ ವಿಷಯದ ಮೇಲೆ ವಿಸ್ತೃತ ಸಂಶೋಧನೆ ನಡೆಸಿದ ಹರೀಶ್, ಯಾವುದೇ ತಿದ್ದುಪಡಿ ಅಗತ್ಯವಿಲ್ಲದೆ ಮೊದಲ ಪ್ರಸ್ತುತಪಡಿಕೆಯಲ್ಲೇ ಪಿ.ಹೆಚ್.ಡಿ ಪದವಿಗೆ ಅರ್ಹರೆಂದು ಘೋಷಿಸಲ್ಪಟ್ಟಿದ್ದಾರೆ. ತಮ್ಮ ಪರಿಶ್ರಮದಿಂದ ಊರಿಗೆ ಕೀರ್ತಿ ತಂದಿರುವ ಹರೀಶ್ ಶೆಟ್ಟಿ ಬಂಡ್ಸಾಲೆ ಅವರನ್ನು ಸ್ಥಳೀಯರು, ಸ್ನೇಹಿತರು ಹಾಗೂ ಅನೇಕ ಸಂಘ– ಸಂಸ್ಥೆಗಳು ಅಭಿನಂದಿಸಿವೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles