ಉಡುಪಿ: ಕಾಶ್ಮೀರದ ಪಹಲ್ಗಾವ್ ನಲ್ಲಿ ನಡೆದ ಘಟನೆಯನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ದುಷ್ಟ ಸಂಹಾರ ಮಾಡುವ ಸಂದೇಶ ನೀಡಿದ್ದಾನೆ, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಶ್ರೀಕೃಷ್ಣ ಪರಮಾತ್ಮ ಮತ್ತು ತಾಯಿ ಮೂಕಾಂಬಿಕೆ ಶಕ್ತಿ ಕೊಡಲಿ, ದುಷ್ಟರ ಸಂಹಾರವಾಗಬೇಕು. ಭಾರತ ಶಾಂತಿಯುತವಾಗಬೇಕು ಎಂದು ಶಾಸಕ ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಭಾನುವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ದೇವರ ದರ್ಶನ ಪಡೆದು ಅವರು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಾಚಿಕೆ ಮತ್ತು ತಲೆತಗ್ಗಿಸುವ ಪರಿಸ್ಥಿತಿ ಬಂದಿದೆ. ನೀವು ನಾವು ಶಾಶ್ವತ ಅಲ್ಲ, ಈ ದೇಶ,ನೆಲ,ಜಲ,ಭೂಮಿ ಶಾಶ್ವತ. ಪಾಕಿಸ್ತಾನ ದೇಶದ ಪರ ಹೇಳಿಕೆ ಕೊಡುವುದು ಮೂರ್ಖತ್ವವಾಗಿದೆ. ಅವರೆಲ್ಲರ ಹೇಳಿಕೆಗಳನ್ನು ಶ್ರೀಕೃಷ್ಣನಿಗೆ ಬಿಡಬೇಕು. ದೇವರು ಅವರಿಗೆ ಸದ್ಬುದ್ಧಿ ಕೊಡಲಿ ಎಂದರು. ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಯಾವಾಗ ಇಳಿದು ಹೋಗುತ್ತಾರೋ ಗೊತ್ತಿಲ್ಲ. ವಯಸ್ಸು 76 ಆಗಿದೆ ಈ ಕ್ಷಣದಲ್ಲಾದರೂ ಭರತ ಭೂಮಿ, ಪುಣ್ಯಭೂಮಿಯ ಪರವಾಗಿ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ಇದು ರಾಕ್ಷಸಿ ಮನೋಭಾವ ಶ್ರೀ ಕೃಷ್ಣನೇ ನಿಮಗೆ ಉತ್ತರ ಕೊಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.