ಕೋಟ : ಕಾವಡಿ ಮೂಲದ ವ್ಯಕ್ತಿಯೋರ್ವರು 7 ತಿಂಗಳುಗಳಿಂದ ನಾಪತ್ತೆಯಾಗಿರುವ ಘಟನೆ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕಾಶ ಶೆಟ್ಟಿ (39) ನಾಪತ್ತೆಯಾಗಿರುವ ವ್ಯಕ್ತಿ. ಸುಮಾರು 5 ವರ್ಷಗಳಿಂದ ಮಂಗಳೂರುನಲ್ಲಿ ರೊಟ್ಟಿ ಪ್ಯಾಕೇಜಿಂಗ್ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಶೆಟ್ಟಿ ಅವರು 5-6 ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದರು. ಪೋನ್ ನಲ್ಲಿ ಮಾತಾನಾಡುವಾಗ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ನಲ್ಲಿ ರೊಟ್ಟಿ ಪ್ಯಾಕೇಜಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದರು. ಕಳೆದ ವರ್ಷ 2024ರ ಜೂನ್ ತಿಂಗಳಿನಲ್ಲಿ ಮನೆಗೆ ಬಂದಿದ್ದ ಇವರು ಸುಮಾರು 7 ತಿಂಗಳಿನಿಂದ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಸದ್ಯ ಪ್ರಕಾಶ್ ಅವರ ಪೋನ್ ಸ್ವೀಚ್ ಆಫ್ ಆಗಿದೆ. ಈ ಹಿಂದೆ ಕೂಡ ಮನೆ ಬಿಟ್ಟು ಹೋಗಿರುವ ಹಿನ್ನಲೆಯಲ್ಲಿ ಕಾದು 7 ತಿಂಗಳ ಬಳಿಕ ಮನೆಯವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾದ ಮನುಷ್ಯನ ಚಹರೆ ವಿವರ: ಪ್ರಕಾಶ ಶೆಟ್ಟಿ, ಪ್ರಾಯ 39 ವರ್ಷ, ತಂದೆ:ವೆಂಕಪ್ಪ ಶೆಟ್ಟಿ, ವಾಸ:ಕಾವಡಿ ಗ್ರಾಮ, ಎತ್ತರ: 5.5
ಸಾಧಾರಣ ಮೈಕಟ್ಟು ಎಣ್ಣೆ ಕಪ್ಪು ಬಣ್ಣ, ಕನ್ನಡ ಮಾತನಾಡುತ್ತಾರೆ, ಅರ್ಧನ ತೋಳಿನ ನೀಲಿ ಶರ್ಟ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ, ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 0820-2564155 ಅಥವ 9480805454 ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ, ಉಡುಪಿ : 0820 2561966 9480805432 ಸಂಪರ್ಕಿಸಲು ಕೋರಲಾಗಿದೆ.



