Tuesday, February 24, 2026

spot_img

ಕಾರು ಪಲ್ಟಿ: ಎರಡುವರೆ ವರ್ಷದ ಮಗು ಸಾವು..

ಉಡುಪಿ: ಸಿದ್ದಾಪುರ ಸಮೀಪದ ಉಳ್ಳೂರು 74 ಗ್ರಾಮದ ಜಡ್ಡಿನಮನೆ ನಿವಾಸಿ ರಾಘವೇಂದ್ರ ಆಚಾರ್ಯ ಅವರು ಪತ್ನಿ ತುಳಸಿ ಹಾಗೂ ಎರಡುವರೆ ವರ್ಷದ ಮಗಳು ಅಯಾನ್ಯ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮಗು ಮೃತಪಟ್ಟಿದೆ.

ಫೆ.21ರಂದು ಅಂಪಾರು ಕಡೆಯಿಂದ ಉಳ್ಳೂರಿಗೆ ತೆರಳುತ್ತಿದ್ದ ಸಂದರ್ಭ ರಾಜ್ಯ ಹೆದ್ದಾರಿಯ ಅಂಪಾರು ಗ್ರಾಮದ ಬಾಲ್ಕಟ್ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಮೂವರು ಗಾಯಗೊಂಡರು. ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಾಘವೇಂದ್ರ ಆಚಾರ್ಯ ಹಾಗೂ ತುಳಸಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಯಾನ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಘಟನೆ ಕುರಿತು ಅಂಪಾರು ಗ್ರಾಮದ ವಿವೇಕ್ ಅವರು ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles