ಉಡುಪಿ : ಕಲಾವಿದ ಕೆ. ಸುರೇಂದ್ರ ಶೆಣೈ ಅವರಿಗೆ ಯಕ್ಷಪುರಸ್ಕಾರ ಉಡುಪಿಯ ದಾನಿ, ಕಲಾಪ್ರೇಮಿ ಶ್ರೀಮತಿ ಪ್ರಭಾವತಿ ವಿ. ಶೆಣೈ ಮತ್ತು ಶ್ರೀ ಯು. ವಿಶ್ವನಾಥ ಶೆಣೈ ದಂಪತಿಗಳ ಪ್ರಾಯೋಜಕತ್ವದಲ್ಲಿ ವೃತ್ತಿ ಮೇಳಗಳಲ್ಲಿ ಮತ್ತು ಹವ್ಯಾಸಿ ಸಂಘಗಳಲ್ಲಿ ದೀರ್ಘಕಾಲ ಭಾಗವತರಾಗಿ ಕಲಾಸೇವೆಗೈದ ಕೆ. ಸುರೇಂದ್ರ ಶೆಣೈ ಅವರಿಗೆ ಕೆರ್ವಾಶೆಯ ಅವರ ಸ್ವಗೃಹದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ನಗದು ಪುರಸ್ಕಾರದೊಂದೊಂದಿಗೆ ಗೌರವಿಸಲಾಗುವುದು. ಮಾರ್ಚ್ 19, 2025 ಬುಧವಾರ ಸಂಜೆ 5.00 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಹಾಗೂ ಎ.ವಿ.ಎಂ ರಮೇಶ್ ಕಾರ್ಣಿಕ್ ಉಪಸ್ಥಿತರಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.