ಉಡುಪಿ : ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು, ಇದರ ಹಿರಿಯಡ್ಕ ಉಪಸಂಘದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಚ್ ರಾಜೇಂದ್ರ ಕುಮಾರ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೇಂದ್ರ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಅಶೋಕ್ ಮೊಯ್ಲಿ, ಉಪಾಧ್ಯಕ್ಷ ಕರುಣಾಕರ್ ಎಮ್ ಎಚ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೀಣಾ ಗಣೇಶ್, ಜೊತೆ ಕಾರ್ಯದರ್ಶಿ ರೋಹಿತಾಕ್ಷ ಮರೋಳಿ, ಕೋಶಾಧಿಕಾರಿ ಶ್ರೀಮತಿ ಗೀತಾ ಕಲ್ಯಾಣಪುರ ಇವರ ಉಪಸ್ಥಿತಿಯಲ್ಲಿ ನಡೆಯಿತು. ಅಶೋಕ್ ಮೊಯ್ಲಿ, ಕರುಣಾಕರ್ ಎಮ್ ಎಚ್, ರೋಹಿತಾಕ್ಷ ಮರೋಳಿ ಸಮಾಜದ ಬಗ್ಗೆ ಹಿತನುಡಿಗಳ್ಳನ್ನಾಡಿದರು.

ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ದೇವಾಡಿಗ ಸ್ವಾಗತಿಸಿ ಹಾಗೂ ಎಲ್ಲರ ಸಹಕಾರ ಕೋರಿದರು. ಸಂಘದ ಸದಸ್ಯರುಗಳು ಭಾಗವಹಿಸಿ ಸಲಹೆ ಸೂಚನೆಗಳನ್ನ ನೀಡಿದರು.
ರಮೇಶ್ ಸೇರಿಗಾರ್ ಕಾರ್ಯದರ್ಶಿ ವರದಿ ಸಲ್ಲಿಸಿದರು. ಶ್ರೀಮತಿ ಆಶಾ ರಮೇಶ್ ಧನ್ಯವಾದ ಸಲ್ಲಿಸಿದರು