ಉಡುಪಿ: ಹೋರಾಟ ಹಾಗೂ ಜನಪರ ಕಾಳಜಿಯನ್ನು ಧ್ಯೇಯವಾಗಿಸಿಕೊಂಡು ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣಕ್ಕೆ ಐದು ಮಹಿಳಾ ಸದಸ್ಯರು ಸೇರ್ಪಡೆಯಾದರು.ಉಡುಪಿಯ ಮಥುರಾ ಛತ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯ ವೈಖರಿ ಹಾಗೂ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಮಹಿಳೆಯರಾದ ವಿಶಾಲಿ, ಮಾಧವಿ, ವಿಜಯ, ಜಯಂತಿ ಮತ್ತು ಮಂಜುಳಾ ಅಧಿಕೃತವಾಗಿ ಸಂಘಟನೆಗೆ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಮಹಿಳಾ ಸದಸ್ಯರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಅನುಷಾ ಆಚಾರ್ ಪಳ್ಳಿ, ಗೌರವ ಸಲಹೆಗಾರರಾದ ಸವಿತಾ, ಪವಿತ್ರ ಶೆಟ್ಟಿ, ಮೀರಾ ಸಾವಂತ್ ಹಾಗೂ ಜಯಪ್ರಕಾಶ್ ಉಪಸ್ಥಿತರಿದ್ದರು. ಮಹಿಳಾ ಸದಸ್ಯರ ಸೇರ್ಪಡೆಯೊಂದಿಗೆ ಸಂಘಟನೆಗೆ ಹೊಸ ಶಕ್ತಿ ಲಭಿಸಿದೆ ಎಂದು ಕರವೇ ಮುಖಂಡರು ಅಭಿಪ್ರಾಯಪಟ್ಟರು.



