ಉಡುಪಿ : ಕಮಲಶಿಲೆ ಯಕ್ಷಗಾನ ಮೇಳದ ಚೌಕಿಯಲ್ಲಿ ಅಪರೂಪದ ಘಟನೆ ನಡೆದಿದೆ. ಯಕ್ಷಗಾನ ಮೇಳದ ಚೌಕಿಗೆ ಒಂದು ಕಾಡು ಜಿಂಕೆ ಪ್ರವೇಶಿಸಿದ್ದು, ಕಲಾವಿದರಲ್ಲೂ, ಗ್ರಾಮಸ್ಥರಲ್ಲೂ ಕುತೂಹಲ ಮತ್ತು ಚಕಿತ ಉಂಟುಮಾಡಿತು.

ಮೇಳದ ಚೌಕಿಯ ಹಿಂದೆ ಇರುವ ಕಾಡು ಪ್ರದೇಶದಿಂದ ಜಿಂಕೆ ನೇರವಾಗಿ ಬಂದು ಮೇಳದ ಚೌಕಿ ಬಳಿಯೇ ಕೆಲಕಾಲ ನಿಂತು ಪರಿಸರವನ್ನು ಶಾಂತವಾಗಿ ವೀಕ್ಷಿಸಿದೆ ಎಂದು ಕಲಾವಿದರು ತಿಳಿಸಿದ್ದಾರೆ.

ಜಿಂಕೆಯ ಚಲನವಲನವನ್ನು ನೋಡಿ ಕೆಲವರಿಗೆ ಕ್ಷಣಕಾಲ ನಂಬಲಾಗದ ಸ್ಥಿತಿ ಉಂಟಾದರೂ, ಜಿಂಕೆ ಯಾವತ್ತೂ ಆತಂಕಗೊಳ್ಳದೇ ನಿಧಾನವಾಗಿ ಮರಳಿ ಕಾಡಿನತ್ತ ತೆರಳಿದೆ. ಈ ಘಟನೆಗೆ “ಅಪರೂಪದ, ಶುಭಸೂಚಕ” ಎಂದೂ ಕಾಮೆಂಟ್ ಮಾಡಿದ್ದಾರೆ. ಇನ್ನು ಬಹುತೇಕ ಕಾಡು ಪ್ರಾಣಿಗಳು ಸದ್ದು ಗದ್ದಲವಿರುವ ಯಕ್ಷಗಾನ ನಡೆಯುವ ಸ್ಥಳಕ್ಕೆ ಬರುವುದು ಅಪರೂಪ. ಆದರೆ ಈ ಜಿಂಕೆ ಬೆಳಕಿನ ಆಕರ್ಷಣೆ ಹಿನ್ನಲೆಯಲ್ಲಿ ಚೌಕಿ ಮನೆಗೆ ಭೇಟಿ ನೀಡಿರಬಹುದೇ ಎನ್ನುವ ಪ್ರಶ್ನೆ ಮೂಡಿದೆ.



