ಉಡುಪಿ : ನವದುರ್ಗಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕನ್ಯಾನ ಸದಾಶಿವ ಶೆಟ್ಟಿ ನಿರ್ಮಾಣದ, ಇಸ್ಮಾಯಿಲ್ ಮೂಡುಶೆಡ್ಡೆ ರಚನೆ ಮತ್ತು ನಿರ್ದೇಶನದ ನೂತನ ಕನ್ನಡ ಚಲನಚಿತ್ರ ಪದ್ಮನಾಭ ಎಂಡ್ ಫ್ಯಾಮಿಲಿ ಗೆ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಆಕ್ಷನ್ ಕಟ್ ಹೇಳುವ ಮೂಲಕ, ದೀಪ ಬೆಳಗಿಸಿ ದೇವಳದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ಸಮಕ್ಷಮದಲ್ಲಿ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಮಾತೃ ವೈಭವ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ. ಶೆಟ್ಟಿ, ನವದುರ್ಗಾ ಲೇಖನ ಸಮಿತಿಯ ಕಾರ್ಯಧ್ಯಕ್ಷ ಶ್ರೀಕಾಂತ್ ಭಟ್ ನಂದಳಿಕೆ, ಪ್ರಧಾನ ಕಾರ್ಯದರ್ಶಿ ಗೀತಾಂಜಲಿ ಎಂ. ಸುವರ್ಣ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಮಾದವ ಆರ್ ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಜಯಲಕ್ಷ್ಮಿ ಶೆಟ್ಟಿ, ಚರಿತ ದೇವಾಡಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಚಿತ್ರದಲ್ಲಿ ನಾಯಕ ನಟನಾಗಿ ರಿದನ್ ಶೆಟ್ಟಿ ಮತ್ತು ನಟಿಯಾಗಿ ಸಂಗೀತಾ ಶೃಂಗೇರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹಾಗೂ ಪ್ರಧಾನ ಪಾತ್ರದಲ್ಲಿ ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಪುಷ್ಪರಾಜ್ ಬೋಳಾರ್, ಮಾನಸಿ ಸುಧೀರ್, ರವಿ ರಾಮಕುಂಜ ನಟಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.



