Thursday, March 26, 2026

spot_img

ಕನಕಕಿಂಡಿ ಸ್ವರ್ಣ ಕವಚ ಸೇವಾಕರ್ತ ಪ್ರಮೋದ್‌ ಮಧ್ವರಾಜ್‌ ಪ್ರಧಾನಿ ಕಾರ್ಯಕ್ರಮದಿಂದ ದೂರ: ಚರ್ಚೆ ?

ಉಡುಪಿ : ಪ್ರಧಾನಿ ನರೇಂದ್ರ ಮೋದಿಯ ಅವರು ಉಡುಪಿ ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಲಕ್ಷಾಂತರ ರೂ. ಮೌಲ್ಯದ ಸ್ವರ್ಣ ಕವಚವನ್ನು ಉದ್ಘಾಟಿಸಿರುವುದು ಪ್ರಧಾನಿ ಭೇಟಿಯ ಹೈಲೈಟ್‌ ಗಳಲ್ಲಿ ಒಂದು. ಆದರೆ ಕನಕನ ಕಿಂಡಿಗೆ ಅಳವಡಿಸಲಾದ ಈ ಲಕ್ಷಾಂತರ ರೂ. ಮೌಲ್ಯದ ಸ್ವರ್ಣ ಕವಚವನ್ನು ಸೇವಾರೂಪದಲ್ಲಿ ನೀಡಿರುವುದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರನ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗದೆ ಇರುವ ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ.

ಸ್ವರ್ಣ ಕವಚವನ್ನು ನರೇಂದ್ರ ಮೋದಿ ಆಗಮನದ ವೇಳೆ ಉದ್ಘಾಟಿಸಲು ಕಾರ್ಯಕ್ರಮ ನಿಗದಿ ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಜೊತೆ ಪ್ರಮೋದ್ ಮಧ್ವರಾಜ್ ಕೂಡ ಪಾಲ್ಗೊಳ್ಳಲಿದ್ದರು. ಅದರೆ ಪ್ರಧಾನಿ ಅವರು ಉಡುಪಿಗೆ ಬಂದಾಗ ಸೇವಾಕರ್ತರಾದ ಮಾಜಿ ಪ್ರಮೋದ್‌ ಮಧ್ವರಾಜ್‌ ಎಲ್ಲಿಗೂ ಕಾಣಿಸಿಕೊಂಡಿರಲಿಲ್ಲ.

ಹೀಗಾಗಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಉದ್ದೇಶ ಪೂರ್ವಕವಾಗಿ ದೂರ ಇಡಲಾಗಿದೆ ಎನ್ನುವ ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕೇಳಿ ಬಂದಿದೆ. ಹಿಂದಿನ ಇತಿಹಾಸವನ್ನು ಕೆಣಕಿರುವ ಕೆಲವರು ಮಠದಿಂದ ಕನಕ ದಾಸರನ್ನು ಹೊರಗೆ ಇಟ್ಟಂತೆ ಪ್ರಮೋದ್‌ ಮಧ್ವರಾಜ್‌ ಅವರನ್ನು ಕೂಡ ಹೊರಗೆ ಇಡಲಾಗಿದೆ ಎಂದು ಆರೋಪಿದ್ದಾರೆ.

 ಇನ್ನು ಈ ವಿಚಾರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುವವರ ಪಟ್ಟಿಯನ್ನು ಮಠದ ವತಿಯಿಂದ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ, ಆದರೆ ಪ್ರಧಾನಿ ಕಾರ್ಯಾಲಯದಿಂದ ಬಂದ ಕಾರ್ಯಕ್ರಮದ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಹೆಸರು ಇರಲಿಲ್ಲ ಎನ್ನಲಾಗುತ್ತಿದೆ.

ಈ ಪ್ರತಿಕ್ರಿಯೇ ನೀಡಿರುವ ಪ್ರಮೋದ್‌ ಮಧ್ವರಾಜ್‌, ಪ್ರಧಾನಿ ಕಾರ್ಯಾಲಯದಿಂದ ಅನುಮೋದನೆಗೊಂಡು ಬಂದ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಹಾಗಾಗಿ ನಾನು ಬಂದಿಲ್ಲ.

ಆ ಬಳಿಕವೂ ಕೂಡ ಯಾರು ನನ್ನನು ಸಂಪರ್ಕಿಸಿಲ್ಲ. ನಾನು ಸೇವಾ ರೂಪದಲ್ಲಿ ಕನಕನ ಕಿಂಡಿಗೆ ಸ್ವರ್ಣ ಕವಚದ ನೀಡಿದ್ದು, ಅದನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ಇದರಿಂದ ನನಗೆ ಸಂತೋಷ ಆಗಿದೆ ಎಂದು ಅವರು ತಿಳಿಸಿದ್ದಾರೆ.

 ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ಹಾಗಾದ್ರೆ ನಿಜವಾಗಿ ಪ್ರಮೋದ್‌ ಮಧ್ವರಾಜ್‌ ಅವರ ಕಾರ್ಯಕ್ರಮದಿಂದ ದೂರ ಉಳಿಯಲು ಕಾರಣ ಯಾರು ? ಸೇವಾಕರ್ತರನ್ನೆ ಕಾರ್ಯಕ್ರಮದಿಂದ ದೂರವಿಡಲು ಕಾರಣವೇನು ಎನ್ನುವುದು ನೆಟ್ಟಿಗರ ಯಕ್ಷ ಪ್ರಶ್ನೆ…

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles