ಉಡುಪಿ :ಪಾಶ್ಚಾತ್ಯ ದೇಶಗಳಲ್ಲಿ ಕೆಲವರು ಏಪ್ರಿಲ್ ತಿಂಗಳ ಮೊದಲ ದಿನವನ್ನು “ಏಪ್ರಿಲ್ ಫೂಲ್” ಡೇ ಎಂದು ಆಚರಿಸುತ್ತಾರೆ, ಆದರೆ ಸಾಸ್ತಾನದ ನವ ವಿವಾಹಿತ ದಂಪತಿಗಳು ಮದುವೆಯ ಸಂದರ್ಭದಲ್ಲಿ ಉಡುಗೊರೆ ರೂಪದಲ್ಲಿ ಬಂದಂತಹ ಗಿಡವನ್ನು ನೆಟ್ಟಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ನೆಟ್ಟಿಗರ ಅಪಾರ ಮೆಚ್ಚುಗೆಯನ್ನು ಪಡೆಯುತ್ತಿದೆ.
ಸಾಸ್ತಾನದ ಶ್ಯಾಮ್ ಸುಂದರ ಚಡಗ ಮತ್ತು ಅರುಣಾಚಡಗ ದಂಪತಿಗಳು ಬೆಂಗಳೂರು ನಿವಾಸಿಗಳಾಗಿದ್ದು, ಶ್ಯಾಮ್ ಸುಂದರ ಅವರ ಸಹೋದರಿಯ ಮಗಳಾದ ಸಿಂಧು ಮತ್ತು ಅವಿನಾಶ್ ಅವರ ಮದುವೆ ಇತ್ತೀಚಿಗೆ ನಡೆದಿತ್ತು. ಈ ಸಂದರ್ಭದಲ್ಲಿ ನವ ದಂಪತಿಗಳಿಗೆ ಅವರು ಎರಡು ಗಿಡಗಳನ್ನು ಕೂಡ ಉಡುಗೊರೆಯಾಗಿ ಕೊಟ್ಟಿದ್ದರು. ಶ್ರೀಮತಿ ಅರುಣ ಚಡಗ ಅವರು ಬೆಂಗಳೂರಿನ ಖ್ಯಾತ ಸಾಫ್ಟ್ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಸಾಸ್ತಾನದ ತಮ್ಮ ಮನೆಯಲ್ಲೇ ಪರಿಸರಕ್ಕಾಗಿ ಒಂದು ಮಿಯಾವಾಕಿ ವನವನ್ನು ಕೂಡ ನಿರ್ಮಿಸಿರುತ್ತಾರೆ. ಏಪ್ರಿಲ್ ಒಂದರಂದು ಸಿಂಧೂ ಅವಿನಾಶ್ ದಂಪತಿಗಳು ಈ ಮಿಯಾವಾಕಿ ವನದಲ್ಲೇ ಉಡುಗೊರೆಯಾಗಿ ಪಡೆದ ಎರಡು ಗಿಡಗಳನ್ನು ನೆಟ್ಟು ಏಪ್ರಿಲ್ ಕೂಲ್ ಡೇ ಆಚರಿಸಿರುವುದು ಒಂದು ಮಾದರಿಯಾಗಿರುತ್ತದೆ.