Friday, April 4, 2025

spot_img

ಎ.18ರಂದು “ಕೋರ” ಚಿತ್ರ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ 

ಉಡುಪಿ: ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿದ ಮತ್ತು ಒರಟ ಶ್ರೀ ನಿರ್ದೇಶಿಸಿದ ‘ಕೋರ’ ಚಿತ್ರವು ಇದೇ ಎ.18ರಂದು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಿಯಾಲಿಟಿ ಶೋ ಖ್ಯಾತಿ ಪಡೆದಿರುವ ಸುನಾಮಿ‌ ಕಿಟ್ಟಿ ಈ ಚಿತ್ರದ ನಾಯಕ ನಟರಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ಮಾಪಕ ಪಿ. ಮೂರ್ತಿ ಅವರು, ಕೊರಗಜ್ಜನ‌ ಆಶೀರ್ವಾದದಿಂದ ಆರಂಭವಾದ ಚಿತ್ರ “ಕೋರ”. ಇದು ನಮ್ಮ ನೆಲದ ಕಥೆ.‌ ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ‌ ಕುರಿತಾದ ಕಥೆಯೂ ಕೂಡಾ ಆಗಿದೆ. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ.‌ ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಸೇರಿ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ನಿರ್ದೇಶಕ ಒರಟ ಶ್ರೀ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ಉತ್ತಮವಾಗಿ ನಟಿಸಿದ್ದಾರೆ ಎಂದರು.

ನಾನು ಕೂಡಾ ಕಠೋರ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಉತ್ತಮ‌ವಾಗಿ ಮೂಡಿಬಂದಿರುವ ಈ ಚಿತ್ರ ಎ.18ರಂದು ಕನ್ನಡ,‌ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ.‌ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಅವರು ಹೇಳಿದ್ದಾರೆ. ನಿರ್ದೇಶಕ ಒರಟ ಶ್ರೀ ಮಾತನಾಡಿ, ಕೋರ 90 ವರ್ಷಗಳ ಹಿಂದೆ ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದ ಕಥೆ. ಈಗ, ಒಂದು ಸಣ್ಣ ಭೂಮಿಗೆ ಸಹ ಸಂಘರ್ಷ ನಡೆಯುತ್ತದೆ. ಇದು ವಿಶಿಷ್ಟ ವಿಷಯವನ್ನು ಹೊಂದಿರುವ ಕಮರ್ಷಿಯಲ್ ಚಿತ್ರ. ಇದು ಕನ್ನಡ ಚಿತ್ರವಾಗಿದ್ದರೂ, ಇದು ಎಲ್ಲಾ ಭಾಷೆಗಳೊಂದಿಗೆ ಸಂಪರ್ಕ ಸಾಧಿಸಬಹುದಾದ ಕಥೆ ಎಂದು ಕೆಲವರು ಹೇಳಿದ್ದಾರೆ, ಅದಕ್ಕಾಗಿಯೇ ನಾವು ಇದನ್ನು ಬಹು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೋರಾ ಒಂದು ಉತ್ತಮ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ ಎಂದು ಹೇಳಿದ ಸುನಾಮಿ ಕಿಟ್ಟಿ ಈ ಪಾತ್ರಕ್ಕೆ ತಮ್ಮನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ರತ್ನಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ ಮೂರ್ತಿ ನಿರ್ಮಿಸಿದ ಮತ್ತು ಒರಟ ಶ್ರೀ ನಿರ್ದೇಶಿಸಿದ ಈ ಚಿತ್ರದ ತಾರಾಗಣದಲ್ಲಿ ಎಂಕೆ ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ಸೌಜನ್ಯ ನಟಿಸಿದ್ದಾರೆ, ಹೇಮಂತ್ ಕುಮಾರ್, ಸಂಗೀತವಿದ್ದು, ಸೆಲ್ವಂ ಛಾಯಾಗ್ರಾಹಣವಿದೆ. ತಮಿಳು ಆವೃತ್ತಿಯನ್ನು ಶಾನ್ ವಿತರಿಸಲಿದ್ದಾರೆ ಮತ್ತು ತೆಲುಗು ಆವೃತ್ತಿಯನ್ನು ಬಾಲಾಜಿ ವಿತರಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles