ಉಡುಪಿ : ಇವರಿಗೆ ಗುರುಪುರದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಳದ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಖ್ಯಾತ ಪ್ರಸಂಗಕರ್ತ, ಅರ್ಥಧಾರಿ, ಶ್ರೇಷ್ಠ ಶಿಕ್ಷಕರಾಗಿದ್ದ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ಈ ಬಾರಿಯ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರೂ, ಪಾರಂಪರಿಕ ಯಕ್ಷಗಾನದ ಬಗ್ಗೆ ಅಪಾರ ಅನುಭವ ಹೊಂದಿರುವ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್.ವಿ.ಭಟ್ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಸೀತಾನದಿ ಗಣಪಯ್ಯ ಶೆಟ್ಟಿ ಪ್ರತಿಷ್ಠಾನದ ಅಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಸಮಾರಂಭದಲ್ಲಿ ಎಸ್.ವಿ. ಉದಯಕುಮಾರ್ ಶೆಟ್ಟಿ, ಕೆ. ದೇವಿಪ್ರಸಾದ ಶೆಟ್ಟಿ,ಪೊಲ್ಯ ಉಮೇಶ್ ಶೆಟ್ಟಿ,ಡಾ. ರವಿರಾಜ ಶೆಟ್ಟಿ, ಎಸ್. ಅಶೋಕ್ ಕುಮಾರ್ ಶೆಟ್ಟಿ, ಸೀತಾನದಿ ವಿಟ್ಠಲ ಶೆಟ್ಟಿ, ಎಸ್. ಜಯರಾಮ ಶೆಟ್ಟಿ,ಬಿ. ಭುವನಪ್ರಸಾದ ಹೆಗ್ಡೆ, ಡಾ. ಬಿ. ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.


