Wednesday, October 22, 2025

spot_img

ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು ಜಾಮೀನು ಷರತ್ತು ಪಾಲಿಸದ ಆರೋಪ: ನ್ಯಾಯಾಂಗ ಬಂಧನ

ಉಡುಪಿ : ದ್ವೇಷ ಭಾಷಣ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಪಡೆದಿದ್ದ ಎಸ್‌ಡಿಪಿಐ ಮುಖಂಡ ರಿಯಾಝ್ ಕಡಂಬು  ಜಾಮೀನು ಷರತ್ತು ಪಾಲಿಸದ ಆರೋಪದಲ್ಲಿ ಉಡುಪಿ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 ಬ್ರಹ್ಮಾವರ ತಾಲೂಕಿನ ಕುಂಜಾಲು ಬಳಿ ದನದ ತಲೆ ಪತ್ತೆ ಪ್ರಕರಣದಲ್ಲಿ ದ್ವೇಷ ಭಾಷಣ ಮಾಡಿದ್ದ ರಿಯಾಜ್ ಕಡಂಬು, ಇದು ಸಂಘ ಪರಿವಾರದ ವ್ಯವಸ್ಥಿತ ಕೃತ್ಯ ಎಂದಿದ್ದರು. ಈ ಹಿನ್ನಲೆಯಲ್ಲಿ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಯಾಝ್ ಕಡಂಬು ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಅವರು ಹೈಕೋರ್ಟ್ ನಿಂದ ಜಾಮೀನು ಪಡೆದಿದ್ದು, ಇದರಲ್ಲಿ 15 ದಿನಗಳಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ ರಿಯಾಝ್ ಕಡಂಬು ಠಾಣೆಗೆ ಹಾಜರಾಗದೆ ಷರತ್ತನ್ನು ಉಲ್ಲಂಘಿಸಿದ್ದರು‌ ಎನ್ನಲಾಗಿದೆ. ಹೀಗಾಗಿ ಉಡುಪಿ ಪೊಲೀಸರು ರಿಯಾಝ್ ಕಡಂಬು‌ ಅವರನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles