ಕೋಟ : ದಿನಾಂಕ 13 ಎಪ್ರಿಲ್ ನಿಂದ ಮೇ 03 ರ ತನಕ ಪ್ರತಿ ವರ್ಷದಂತೆ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ಯಕ್ಷಗಾನ ತರಬೇತಿ ಶಿಬಿರ ಪ್ರಾರಂಭವಾಗಲಿದೆ. ಪ್ರಾಚಾಯ೯ ಸದಾನಂದ ಐತಾಳ ನಿದೇ೯ಶನದಲ್ಲಿ ನಡೆಯುವ ಈ ತರಗತಿಯಲ್ಲಿ ಗುರುಗಳಾಗಿ ಗಣೇಶ ಚೇಕಾ೯ಡಿ, ಕೇಶವ ಆಚಾರ್, ಶ್ರೀಶ ಆಚಾರ್ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 9-15 ರಿಂದ 1-30 ರ ತನಕ ತರಗತಿ ನಡೆಯಲಿದ್ದು ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ಸದಾನಂದ ರಂಗ ಮಂಟಪದಲ್ಲಿ ತರಗತಿ ನಡೆಯುತ್ತಿದ್ದು ಆಸಕ್ತರು ಯಕ್ಷಗಾನ ಕಲಾಕೇಂದ್ರ ದ ಸದಾನಂದ ರಂಗ ಮಂಟಪ ಕ್ಕೆ ಬಂದು 09/04/2025ರ ಒಳಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.