Wednesday, March 4, 2026

spot_img

ಎನರ್ಜಿ ಅಥವಾ ಸಾಮರ್ಥ್ಯ ಇದ್ದಾಗ ಕೆಲಸ ನಿರಾಯಾಸ..

ಧರಣಿಗರ್ಭ ಸಂಭೂತಂ ವಿದ್ಯುತ್ಕಾಂತಿಂ ಸಮಪ್ರಭಂ|
ಕುಮಾರಂ ಶಕ್ತಿಹಸ್ತಂಚ ಮಂಗಲಂ ಪ್ರಣಮಾಮ್ಯಹಂ||🙏🙏🙏
ವಿದ್ಯುತ್ಕಾಂತಿಯ ಪ್ರಭೆಯುಳ್ಳ ಮಂಗಳನನ್ನು ಸ್ಮರಿಸುತ್ತಾ 🙏🙏🙏


ಯಾವುದೇ ಒಂದು ಕೆಲಸವನ್ನು ಮಾಡುವಾಗ ಎನರ್ಜಿ ಅಥವಾ ಸಾಮರ್ಥ್ಯ ಬಹಳ ಅತ್ಯಗತ್ಯ. ಅದು ಇದ್ದಾಗಲೇ ಎಷ್ಟೇ ಶ್ರಮದ ಕೆಲಸವಿದ್ದರೂ ನಿರಾಯಾಸವಾಗಿ ಮುಗಿಸಲು ಸಾಧ್ಯ . ಮಂಗಳನು ಒಂದು ಪವರ್ ಹೌಸ್ ಇದ್ದಹಾಗೆ, ವಿದ್ಯೆ, ಫೈಟಿಂಗ್ ಸ್ಪಿರಿಟ್ ಅಥವಾ ಪರಾಕ್ರಮ, ಹಾಗೆ ಮಾನವೀಯತೆಯ ಗ್ರಹ ಕೂಡಾ ಹೌದು, ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿ ಒಂಬತ್ತು ವರ್ಷಕ್ಕೊಮ್ಮೆ ಬರುವ ಒಂದು ವರ್ಷದ ಮಂಗಳ ದೆಸೆಗೆ ಆಡಿಟಿಂಗ್ ಇಯರ್ ಅಂತಾನೆ ನಾವು ಕರೆಯುತ್ತೇವೆ!!
ಪೂರ್ವ ಜನ್ಮದ ಮತ್ತು ಇಹ ಜನ್ಮದ ಕರ್ಮಗಳಿಗೆ ನಿರ್ದಾಕ್ಷಿಣ್ಯವಾಗಿ ಫಲವನ್ನು ಅನುಗ್ರಹಿಸುತ್ತಾನೆ, ಯಾವುದೇ ತಿಂಗಳಿನ 9, 18 ಮತ್ತು 27 ದಿನದಂದು ಹುಟ್ಟಿದವರನ್ನು ಅವರ ಜೀವನದ ಮೊದಲರ್ಧ ಭಾಗವನ್ನು ಮಂಗಳ ಆಳುವನು ಇದರ ಜೊತೆಗೆ ಸ್ನೇಹಿತ ಗ್ರಹಗಳು ಜೊತೆಗಿದ್ದರೆ ವ್ಯಕ್ತಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ, ಇವರು ಸಾಮಾನ್ಯವಾಗಿ ದೃಢಕಾಯದವರಾಗಿರುತ್ತಾರೆ, ಅಂತರ್ಮುಖಿಗಳಾಗಿರುತ್ತಾರೆ. ತಮ್ಮ ಸಮಾನ ಮನಸ್ಕರಲ್ಲಿ ಮಾತ್ರ ಮನ ಬಿಚ್ಚಿ ಮಾತನಾಡುತ್ತಾರೆ, ಸ್ನೇಹದ ವಿಚಾರದ ಬಂದಾಗ ಜೀವಕ್ಕೆ ಜೀವಕೊಡುವಷ್ಟು ನಂಬಿಕಾರ್ಹರಾಗಿರುತ್ತಾರೆ, ಅದೇ ಧರ್ಮ ತಪ್ಪಿ ಅವರಿಗೆ ಮೋಸ ಮಾಡಿದಲ್ಲಿ ಮನೆಯಿಂದಲೇ ಹೊರಗೆಳೆದು ಎರಡು ತದುಕಿಬಿಡುವಷ್ಟು ಫೈಟಿಂಗ್ ಸ್ಪಿರಿಟ್ ಇರುತ್ತದೆ. ಮಾನವೀಯತೆಯ ವಿಷಯ ಬಂದಾಗ ಮಾತ್ರ ಇವರು ದಾನ ಶೂರ ಕರ್ಣನಾಗುತ್ತಾರೆ. ತನಗೆ ಇದೆಯೋ ಇಲ್ಲವೋ ನೋಡದೆ ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಅಧ್ಯಾತ್ಮದ ವಿಚಾರಗಳಲ್ಲೂ ಸಕ್ರಿಯರಾಗಿರುತ್ತಾರೆ. 1999 ಅಥವಾ ಅದಕ್ಕಿಂದ ಮೊದಲು ಹುಟ್ಟಿದವರಿಗೆ ಸಹಜವಾಗಿಯೇ ಫೈಟಿಂಗ್ ಸ್ಪಿರಿಟ್ ಇರುತ್ತದೆ. ಆದರೆ 2000 ಇಸವಿಯ ನಂತರ ಹುಟ್ಟಿದ ಹೆಚ್ಚಿನ ಮಕ್ಕಳಿಗೆ ಫೈಟಿಂಗ್ ಸ್ಪಿರಿಟ್ ಇರೋದಿಲ್ಲ, ಆ ಮಕ್ಕಳಿಗೆ ಚಂದ್ರನ ಪ್ರಭಾವ ಜಾಸ್ತಿ ಇರುವುದರಿಂದ ಬೇಗನೆ ಹರ್ಟ್ ಆಗುವ ಸ್ವಭಾವವಿರುತ್ತದೆ. ಎಲ್ಲ ಸಮಸ್ಯೆಗಳಿಗೂ ಸಂಖ್ಯಾಶಾಸ್ತ್ರದಲ್ಲಿ crystals ಮತ್ತು ಯಂತ್ರಗಳು ಮುಂತಾದವುಗಳಿಂದ ಪರಿಹಾರವಿರುತ್ತದೆ .
ಸೂರ್ಯನ ಜೊತೆ ಮಂಗಳ ಸೇರಿದಾಗಲಂತೂ (ಮಂಗಳಾದಿತ್ಯ) ಆ ವ್ಯಕ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೇರುತ್ತಾನೆ. ನೋಡಿ ಮುಖೇಶ್ ಅಂಬಾನಿಯವರ ಜನ್ಮದಿನ ಹತ್ತೊಂಬತ್ತು. ಒಂದು ಅಂದರೆ ಸೂರ್ಯ ಮತ್ತು ಒಂಬತ್ತು ಅಂದರೆ ಮಂಗಳ. ಇದು ಜಾತಕನಿಗೆ ತೇಜಸ್ಸು, ಲೀಡರ್ಶಿಪ್ ಪರ್ಸನಾಲಿಟಿ, ಕಮ್ಯುನಿಕೇಷನ್, ರಾಜಕೀಯ ಸಹಕಾರ, ಎಲ್ಲವನ್ನೂ ಕೊಡುತ್ತದೆ.
ಇದರ ಜೊತೆಗೆ ಬುಧನ ಅನುಗ್ರಹ ಎಲ್ಲ ಸೇರಿ ರಾಜಯೋಗವನ್ನು ಅನುಗ್ರಹಿಸಿದೆ. ಇಂತಹ ಜಾತಕನಿಗೆ ಸ್ಕೈ ಇಸ್ ದಿ ಲಿಮಿಟ್ ಅಂತಾರಲ್ಲ ಹಾಗೆ. ಯಾವ ಎತ್ತರಕ್ಕೂ ಬೆಳೆಯಬಹುದು .
ಜೀವನದ ಸಂಘರ್ಷಗಳೇನೇ ಇದ್ದರೂ ತನ್ನ ಕ್ಷೇತ್ರದಲ್ಲಿ ವ್ಯಕ್ತಿ ನಾಯಕನಾಗಿರುತ್ತಾನೆ. ಜೊತೆಯಲ್ಲಿ ಬುಧನಿದ್ದರೆ ಗೆಲುವು, ಸ್ಥಿರತೆ ಕಟ್ಟಿಟ್ಟ ಬುತ್ತಿ.
Example: Akshay Kumar – 9 September 1967
Mātā Amritānandamayī Devi – 27 September 1953
Priyanka Chopra – 18 July 1982
Gautam Hari Singhania Indian billionaire industrialist.- 9 September 1965
Dalip Singh Rana, also known as The Great Khali – August 27, 1972


Dinesh Numerology Consultant – 95919 06335


Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles