ಉಡುಪಿ : ಅಂಬಲಪಾಡಿ ನಿವಾಸಿ ಜೀವನ ವಿಮಾ ನಿಗಮದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಬ್ರಹ್ಮಾವರ ಶಾಖೆಯಲ್ಲಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ ಎಂ. ನಿತ್ಯಾನಂದ ಮಲ್ಯ (79ವರ್ಷ) ಇಂದು ನಿಧನ ಹೊಂದಿದರು. ಪತ್ನಿ, ಈರ್ವರು ಪುತ್ರಿಯರು ಹಾಗೂ ಅಪಾರ ಬಂಧು, ಹಿತೈಷಿಗಳನ್ನು ಅಗಲಿದ ಇವರು ಕಲಾ ಪ್ರೇಮಿಯಾಗಿದ್ದರು. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.