Wednesday, March 4, 2026

spot_img

ಉಪ್ಪುರಿನ ಸ್ಪಂದನ ದಿವ್ಯಾಂಗರ ವಸತಿ ಶಾಲೆಗೆ ಸೋಲಾರ್ ಲೈಟ್ ಕೊಡುಗೆ

ಉಡುಪಿ : ಸಾಂತ್ವನ ಪರಿಯಾಳ ಬಳಗ ಉಡುಪಿ ಇದರ ನಾಲ್ಕನೇ ವಾರ್ಷಿಕೋತ್ಸವ ನಿಮಿತ್ತ ಉಪ್ಪುರಿನ ಸ್ಪಂದನ ದಿವ್ಯಾoಗರ ವಸತಿ ಶಾಲೆಯಲ್ಲಿ ಬಳಗದ ಸದಸ್ಯ ರಾದ ಸತೀಶ್ ಸುವರ್ಣ ರ ಪ್ರಯೋಜಕತ್ವದಲ್ಲಿ ಸತ್ಯನಾರಾಯಣ ಪೂಜೆ, ಬಳಗದ ಪೋಷಕರಾದ ಭರತ್ ಸುವರ್ಣ ಕನ್ನರ್ ಪಾಡಿ ಇವರ ಕೊಡುಗೆಯಾಗಿ ನೀಡಿದ (ಸುಮಾರು 25000)ಸೋಲಾರ್ ಲೈಟ್ ಉದ್ಘಾಟನೆ ಸದಾಶಿವ ಬಂಗೇರ ಕುರ್ಕಾಲು ಇವರ ಅಧ್ಯಕ್ಷತೆ ಯಲ್ಲಿ ನೆರವೇರಿತು.

ಸ್ಪಂದನ ದಿವ್ಯಾoಗರ ವಸತಿ ಶಾಲೆಯ ವ್ಯವಸ್ಥಾಪಕರಾದ ಜನಾರ್ಧನ್ ಸ್ವಾಗತಿಸಿದರು, ಸದಾಶಿವ ಬಂಗೇರ ಕುರ್ಕಾಲು ಪ್ರಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಪರಿಯಾಳ ಸಮಾಜದ ಅಧ್ಯಕ್ಷ ರಾದ ಶಂಕರ್ ಸಾಲಿಯನ್ ಕಟಪಾಡಿ, ಅಶೋಕ್ ಭಂಡಾರಿ ಕುತ್ಪಾಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮನೋಜ್ ಸುವರ್ಣ ಇ ಫಿಟ್ನೆಸ್ ಉಡುಪಿ,, ಬಳಗದ ಕಾರ್ಯದರ್ಶಿ ಶೇಖರ್ ಸಾಲಿಯನ್ ಆದಿಉಡುಪಿ, ಕೋಶಾಧಿಕಾರಿ ಸುಧಾಕರ್ ಸಾಲಿಯಾನ್ ಕಟಪಾಡಿ ಉಪಸ್ಥಿತರಿದ್ದರು. ಭರತ್ ಸುವರ್ಣ ಕನ್ನರ್ ಪಾಡಿ ಹಾಗೂ ಮನೋಜ್ ಸುವರ್ಣ ಉಡುಪಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಹಾಗೆಯೇ ಸ್ಪಂದನ ಸಂಸ್ಥೆ ಯ ವ್ಯವಸ್ಥಾಪಕರು, ಸಿಬ್ಬಂದಿ ಯನ್ನು ಗೌರವಿಸಲಾಯಿತು. ಪರಿಯಾಳ ಸಮಾಜದ ಹಿರಿಯರು ಸಮಾಜ ಅಭಿಮಾನಿ ಅಸೌಖ್ಯದಲ್ಲಿರುವ ಗಣಪತಿ ಕೋಟೇಶ್ವರ ಇವರಿಗೆ ಸಹಾಯ ಧನ ದೊಂದಿಗೆ ಆಹಾರ ಕಿಟ್ ನೀಡಿ ಸಂತೈಸಲಾಯಿತು. ಬಳಗದ ಸದಸ್ಯರಾದ ಪ್ರಶಾಂತ್ ಸಾಲಿಯನ್ ನಲ್ಲೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles