Friday, February 20, 2026

spot_img

ಉಪ್ಪುಂದ–ಬಿಜೂರು ಎನ್‌ಎಚ್‌–66 ಸೇತುವೆ ಮೇಲೆ ಹೊತ್ತಿ ಉರಿದ ಲಾರಿ: ಲಕ್ಷಾಂತರ ರೂ. ನಷ್ಟ..

ಉಡುಪಿ: ಲಾರಿಯೊಂದು ಆಕಸ್ಮಿಕ ಬೆಂಕಿಯಿಂದಾಗಿ ಸೇತುವೆ ಮೇಲೆ ಹೊತ್ತಿ ಉರಿದ ಘಟನೆ ಗುರುವಾರ ಮಧ್ಯರಾತ್ರಿ ಸುಮಾರಿಗೆ ಬೈಂದೂರು ತಾಲೂಕಿನ ಉಪ್ಪುಂದ–ಬಿಜೂರು ಭಾಗದ ರಾಷ್ಟ್ರೀಯ ಹೆದ್ದಾರಿ 66 ಸೇತುವೆಯಲ್ಲಿ ಸಂಭವಿಸಿದೆ.

ಧಾರವಾಡದಿಂದ ಕುಂದಾಪುರಕ್ಕೆ ಪಶು ಆಹಾರ ಸಾಗಿಸುತ್ತಿದ್ದ ಲಾರಿ, ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಯಡ್ತರೆ ಬೈಪಾಸ್ ದಾಟಿ ಬಿಜೂರು ಸಮೀಪಕ್ಕೆ ಆಗಮಿಸುವಾಗ ಹಿಂಬದಿಯ ಟಯರ್ ಸ್ಫೋಟಗೊಂಡು ಬೆಂಕಿ ತಗುಲಿದೆ. ಪರಿಣಾಮ ಲಾರಿಯ ಭಾಗಶಃ ಭಾಗ ಹಾಗೂ ಅದರಲ್ಲಿದ್ದ ಪಶು ಆಹಾರ ಸಂಪೂರ್ಣವಾಗಿ ಅಗ್ನಿಗಾಹುತಿಯಾಗಿ, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿದೆ.

ಲಾರಿ ಚಾಲಕ ಚಂದ್ರಕಾಂತ್ ಅಪಾಯವನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ಹೊರಬಂದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೇತುವೆ ಮೇಲೆಯೇ ಲಾರಿ ಹೊತ್ತಿ ಉರಿದ ಕಾರಣ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಯಡ್ತರೆ ಜಂಕ್ಷನ್ ಬಳಿ ವಾಹನಗಳಿಗೆ ತಿರುವು ನೀಡಿ ಹೆದ್ದಾರಿಯ ಮತ್ತೊಂದು ರಸ್ತೆಯ ಮೂಲಕ ಸಂಚಾರ ವ್ಯವಸ್ಥೆ ಕಲ್ಪಿಸಿದರು.

ಬೈಂದೂರು ಅಗ್ನಿಶಾಮಕ ದಳದ ಪ್ರಮುಖ ಅಗ್ನಿಶಾಮಕರಾದ ಶ್ರೀನಿವಾಸ ಪೂಜಾರಿ, ರವೀಂದ್ರ ಎಸ್. ದೇವಾಡಿಗ, ಚಾಲಕ ಲೋಕೇಶ್ ಎಸ್., ಅಗ್ನಿಶಾಮಕರಾದ ಸುರೇಶ್ ಪಟಗಾರ, ಸಚಿನ್ ಸೇರಿದಂತೆ ಸಿಬ್ಬಂದಿ ಸತತ ಮೂರು–ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರೂ ಸಹಕಾರ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles