ಉಡುಪಿ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾರ್ಗಿಲ್ ವಿಜಯ ದಿನದ ನಿಟ್ಟಿನಲ್ಲಿ ನಿವೃತ್ತ ಸೈನಿಕರಾದ ಕೊಡವೂರು ಮೂಡುಬೆಟ್ಟಿನ ಹವಾಲ್ದಾರ್ ನವೀನ್ ಕ್ರಿಸ್ಟೋಫರ್, ತೆಂಕನಿಡಿಯೂರಿನ ಲ್ಯಾಂಸ್ ನಾಯಕ್ ಯಶವಂತ ಪೂಜಾರಿ, ದೊಡ್ಡಣಗುಡ್ಡೆಯ ಏ.ಎಸ್.ಐ/ಆರ್.ಓ ಕೇಶವ ಆಚಾರ್ಯ ಅವರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿಲಾಯಿತು.

ಗೌರವಾರ್ಪಣೆ ಪಡೆದುಕೊಂಡ ಮೂವರು ನಿವೃತ್ತ ಸೈನಿಕರಾದ ನವೀನ್ ಕ್ರಿಸ್ಟೋಫರ್, ಯಶವಂತ ಪೂಜಾರಿ, ಕೇಶವ ಆಚಾರ್ಯ ಅವರು ತಾವು ಸೇನೆಯಲ್ಲಿ ಸೇವೆ ಸಲ್ಲಿಸಿದ ದಿನದ ನೆನಪುಗಳನ್ನು ಹಂಚಿಕೊಂಡು ಚಾರಿತ್ರಿಕ ದಿನದಂದು ತಮ್ಮ ಮನೆಗೆ ಬಂದು ತಮ್ಮನ್ನು ಗೌರವಿಸಿದಕ್ಕಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಆರ್.ಕೆ.ರಮೇಶ್ ಪೂಜಾರಿ, ಸಂಧ್ಯಾ ತಿಲಕ್ ರಾಜ್, ನಾರಾಯಣ ಕುಂದರ್, ಗಣಪತಿ ಶೆಟ್ಟಿಗಾರ್, ಸತೀಶ್ ಪುತ್ರನ್ ದೊಡ್ಡಣಗುಡ್ಡೆ, ಗಣೇಶ್ ನೆರ್ಗಿ, ತೆಂಕನಿಡಿಯೂರು ಪಂಚಾಯತ್ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.