ಉಡುಪಿ : ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 65 ಕೆ.ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಐಷರ್ ಲಾರಿ ಸಮೇತ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. ಗಣೇಶ (38), ಪಿ. ಗೋಪಾಲ ರೆಡ್ಡಿ (43) ಬಂಧಿತ ಆರೋಪಿಗಳು. ಉಡುಪಿ ಜಿಲ್ಲೆಯಲ್ಲಿ ನಡೆದ ಅತ್ಯಂತ ದೊಡ್ಡ ಗಾಂಜಾ ಬೇಟೆ ಇದಾಗಿದೆ.

ಇಂದು ರಾಷ್ಟ್ರೀಯ ಹೆದ್ದಾರಿ 66 ಕಿನ್ನಿಮೂಲ್ಕಿ ಬಳಿ ಪೊಲೀಸರು ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 65ಕೆ.ಜಿ. ಗಾಂಜಾ ಪತ್ತೆಯಾಗಿದೆ. ಉಡುಪಿ ಸೆನ್ ಪೊಲೀಸ್ ರ ಈ ಕಾರ್ಯಚರಣೆ ನಡೆಸಿದ್ದು, ಆರೋಪಿಗಳಾದ ಗಣೇಶ್ ಮತ್ತು ಗೋಪಾಲ ರೆಡ್ಡಿ ಅವರನ್ನು ವಶಕ್ಕೆ ಪಡೆಯಲಾಯಿತು.

ಒಟ್ಟು 65 ಕಿಲೋ, 039 ಗ್ರಾಂ ತೂಕದ ಗಾಂಜಾ, ಐಷರ್ ಗೂಡ್ಸ್ ಲಾರಿ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಳ್ಳಲಾದ ಸೊತ್ತುಗಳು ಒಟ್ಟು 72,21,520 ಲಕ್ಷ ರೂಪಾಯಿಯದ್ದಾಗಿದ್ದು, 65 ಕೆ.ಜಿ ಗಾಂಜಾಕ್ಕೆ ಸರಿಸುಮಾರು 32 ರಿಂದ 50 ಲಕ್ಷ ಬೆಲೆ ಇದೆ ಎಂದು ಅಂದಾಜಿಸಲಾಗಿದೆ, ಗಾಂಜಾವನ್ನು ಆರೋಪಿಗಳು ಮಾರಾಟದ ಉದ್ದೇಶಕ್ಕೆ ಸಾಗಾಟ ಮಾಡುತ್ತಿದ್ದರು.

ಸೆನ್ ಅಪರಾಧ ಪೊಲೀಸ್ ಠಾಣೆ ಪ್ರಭಾರ ಡಾ. ಹರ್ಷ ಪ್ರಿಯಂವದಾ ಐಪಿಎಸ್ ಅವರ ನಿರ್ದೇಶನ ಮೇರೆಗೆ ಈ ಧಾಳಿ ಮಾಡಲಾಗಿದ್ದು, ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



