Thursday, October 23, 2025

spot_img

ಉಡುಪಿ ನಗರದ ಚಿನ್ನದ ಅಂಗಡಿ ಕಳ್ಳತನ ಪ್ರಕರಣ: 5 ಜನ ಅಂತರ್‌ ರಾಜ್ಯ ಕಳ್ಳರ ಬಂಧನ

ಉಡುಪಿ : ಚಿನ್ನದ ಅಂಗಡಿಯ ಶಟರ್‌ ಬಾಗಿಲನ್ನು ನಕಲಿ ಬೀಗ ಉಪಯೋಗಿಸಿ ಒಳಗೆ ನುಗ್ಗಿ 95,71,000 ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣ, ಇನ್ನಿತರ ವಸ್ತು ಪರಾರಿಯಾದ ಐದು ಜನ ಅಂತರ್‌ ರಾಜ್ಯ ಕಳ್ಳರನ್ನು ಉಡುಪಿ ಪೊಲೀಸ್‌ ರು ಬಂಧಿಸಿದ್ದಾರೆ. ಶುಭಂ ತಾನಾಜಿ ಸಾಥೆ(25), ಪ್ರವೀಣ ಅಪ್ಪ ಸಾಥೆ (23), ನಿಲೇಶ ಬಾಪು ಕಸ್ತೂರಿ(19), ಸಾಗರ ದತ್ತಾತ್ರೇಯ ಕಂಡಗಾಲೆ(32), ಬಾಗವ ರೋಹಿತ್‌ ಶ್ರೀಮಂತ್‌(25) ಬಂಧಿತ ಆರೋಪಿಗಳು.

 ಉಡುಪಿ ವಾದಿರಾಜ ಮಾರ್ಗದಲ್ಲಿರುವ ಚಿನ್ನದ ಅಂಗಡಿಗೆ ಯಾರೋ ಕಳ್ಳರು ಅಂಗಡಿಯ ಶಟರ್‌ ನ ಬಾಗಿಲಿನ ಬೀಗವನ್ನು ಯಾವುದೋ ಕೀ ಯನ್ನು ಉಪಯೋಗಿಸಿ ರಿಫೈನರಿ ಮಷಿನ್‌ ನಲ್ಲಿ ಇಟ್ಟಿದ್ದ ಸುಮಾರು 95,71,000 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಚಿನ್ನಾಭರಣಗಳನ್ನು ಕಳ್ಳರು ಕದ್ದೋಯ್ಯಿದ್ದಿದ್ದರು. ಮುಂಜಾನೆ ಚಿನ್ನದ ಅಂಗಡಿ ಬಾಗಿಲು ತೆಗೆಯಲು ಹೋದಾಗ ಕಳ್ಳರು ಒಳ ನುಗ್ಗಿರುವುದು ಖಚಿತವಾಗಿತ್ತು, ಒಳಗಡೆ ತೆರಳಿ ಪರಿಶೀಲಿಸಿದಾಗ ಚಿನ್ನಾಭರಣ ಮತ್ತು ಇತರ ವಸ್ತುಗಳು ಕಳವಾಗಿರುವುದು ಕಂಡು ಬಂದಿದೆ. ಈ ಕುರಿತು ಚಿನ್ನ ಅಂಗಡಿಯ ಮಾಲಕರು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.  

ಪ್ರಕರಣದ ತನಿಖೆ ಆರಂಭಿಸಿದ ಉಡುಪಿ ನಗರ ಪೊಲೀಸ್‌ ರು ತಂಡ ರಚಿಸಿ ಮಹರಾಷ್ಟ್ರ ಮೂಲದ ಐವರು ಆರೋಪಿಗಳನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಮಲ್‌ಶಿರೋಸ್‌ ತಾಲೂಕಿನ ನಿಮ್‌ಗಾಂವ್‌ ಎಂಬಲ್ಲಿ  ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 74,88,000 ರೂಪಾಯಿ ಮೌಲ್ಯದ 748.8 ಗ್ರಾಂ ಚಿನ್ನ, 3,60,000ರೂಪಾಯಿ ಮೌಲ್ಯದ  4 ಕೆಜಿ 445 ಗ್ರಾಂ ಬೆಳ್ಳಿ, 5,00,000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಕಾರು ಸೇರಿ ಒಟ್ಟು 87,48,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles