Wednesday, October 22, 2025

spot_img

ಉಡುಪಿ ಜಿಲ್ಲಾ ನಾಗರೀಕ ಬಂದೂಕು ತರಬೇತಿ ಶಿಬಿರ ಉದ್ಘಾಟನೆ

ಉಡುಪಿ : ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ಉಡುಪಿ ಜಿಲ್ಲಾ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್‌ ಶಂಕರ್‌ ಐಪಿಎಸ್‌ರವರು ಉದ್ಘಾಟಿಸಿ ಬಂದೂಕು ತರಭೇತಿಯ ಬಗ್ಗೆ ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಉಪಾಧೀಕ್ಷಕರಾದ ತಿಮ್ಮಪ್ಪ ಗೌಡ ಮತ್ತು ಸಶಸ್ತ್ರ ಮೀಸಲು ಆರಕ್ಷಕ ನಿರೀಕ್ಷಕರಾದ ರವಿ ಕುಮಾರ್‌ರವರು ಉಪಸ್ಥಿತರಿದ್ದರು.5 ದಿನಗಳ ಅವಧಿಯಲ್ಲಿ ನಡೆಯುವ ಈ ತರಬೇತಿಗೆ ಒಟ್ಟು 195 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಉಡುಪಿ ಉಪ ವಿಭಾಗದಿಂದ 59, ಕಾರ್ಕಳ ಉಪ ವಿಭಾಗದಿಂದ 55 ಮತ್ತು ಕುಂದಾಪುರ ಉಪವಿಭಾಗದಿಂದ 81 ಅಭ್ಯರ್ಥಿಗಳು ಈ ತರಭೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿಯಲ್ಲಿ ಉಡುಪಿ ಉಪವಿಭಾಗದ ತರಭೇತಿ,  ಕಾರ್ಕಳ ಉಪ ವಿಭಾಗದ ತರಭೇತಿ ಹೆಬ್ರಿಯಲ್ಲಿ ಮತ್ತು ಕುಂದಾಫುರ ಉಪ ವಿಭಾಗದ ತರಭೇತಿ ಕುಂದಾಪುರದಲ್ಲಿ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles