Thursday, October 23, 2025

spot_img

ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ

ಉಡುಪಿ: ಕಾರ್ಪೊರೇಷನ್ ಬ್ಯಾಂಕ್‌ನ ಸಂಸ್ಥಾಪಕ ಹಾಜಿ ಅಬ್ದುಲ್ಲಾ ಅವರ ಮನೆಯನ್ನು ಪಾರಂಪರಿಕ ವಸ್ತುಸಂಗ್ರಹಾಲಯವಾಗಿ ಮರುರೂಪಿಸಲಾಗಿರುವ ಉಡುಪಿಯ ನಾಣ್ಯ ಸಂಗ್ರಹಾಲಯ “ಕಾರ್ಪೊರೇಷನ್ ಬ್ಯಾಂಕ್ ಹೆರಿಟೇಜ್ ಮ್ಯೂಸಿಯಂ” ಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಇತ್ತೀಚಿಗೆ ಭೇಟಿ ನೀಡಿದರು.

ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ಎಂ.ಜಯಪ್ರಕಾಶ್ ರಾವ್, ಜಿಲ್ಲಾಧಿಕಾರಿಗಳಿಗೆ ಮ್ಯುಸಿಯಮ್ ನಲ್ಲಿನ  ಪ್ರಾಚೀನ ನಾಣ್ಯಗಳ ಮಾಹಿತಿಯನ್ನು ಸವಿವರವಾಗಿ ನೀಡಿದರು. ಈ ನಾಣ್ಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ ಬಹಳ ಖುಷಿಯಾಯಿತು. ಬೇರೆ ಬೇರೆ ರಾಜರ, ದೇಶ ವಿದೇಶಗಳ ನಾಣ್ಯಗಳನ್ನು ಸಂಗ್ರಹಣೆ ಮಾಡಿ ವ್ಯವಸ್ಥಿತವಾಗಿ ಪ್ರದರ್ಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಅಶೋಕ್ ಎ.ಭಂಡಗೆ, ಬಿಜಿನೆಸ್ ಡೆವಲಪ್ಮೆಂಟ್ ಡೆಪ್ಯೂಟಿ ರೀಜನಲ್ ಹೆಡ್ ಸತ್ಯ ಬ್ರೊಟೊ ಬಹುದ್ರಿ, ಡೆಪ್ಯೂಟಿ ರೀಜನಲ್ ಹೆಡ್ ಆಪರೇಷನ್ ಶಿವಕುಮಾರ ಆರ್. ಮೊದಲಾದವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles