Sunday, July 27, 2025

spot_img

ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಶಿಬಿರ

ಉಡುಪಿ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಜುಲೈ 14 ರಿಂದ ಜುಲೈ 24, 2025 ರವರೆಗೆ ಬೆಳಿಗ್ಗೆ 9:00 ರಿಂದ ಸಂಜೆ 4:30 ರವರೆಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಆಸ್ಪತ್ರೆಯ ಎರಡು ವಿಭಾಗಗಳು ಭಾಗಿಯಾಗಿವೆ (ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ; ಹಾಗೂ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಜನರಲ್ ಸರ್ಜರಿ) ಹಾಗೂ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ಚಿಕಿತ್ಸೆಯ ಅಗತ್ಯವಿರುವ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಸಹಾಯ ಮಾಡಲು ಸಿದ್ಧವಾಗಿವೆ.

ಸಾಮಾನ್ಯವಾಗಿ ಮಾಡುವ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಅನೇಕ ಅನುಕೂಲಗಳಿವೆ. ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಲ್ಲಿ ಸಣ್ಣ ಗಾಯ ಇರುವುದರಿಂದ, ನೋವು ಕಡಿಮೆಯಿದ್ದು, ಚೇತರಿಕೆ ವೇಗವಾಗುವುದಲ್ಲದೇ ಆಸ್ಪತ್ರೆಯಲ್ಲಿ  ಉಳಿದುಕೊಳ್ಳಬೇಕಾದ ಸಮಯವೂ ಕಡಿಮೆಯಾಗುತ್ತದೆ. ಇಂತಹ ಕಾರ್ಯವಿಧಾನವು ನಮ್ಮ ಸಮುದಾಯಲ್ಲಿ ಹಲವರ ಕೈಗೆಟುಕುವಂತೆ ಮಾಡುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಕೆಳಹೊಟ್ಟೆಯ ಅಥವಾ ತೊಡೆಸಂದು ನೋವು, ಫೈಬ್ರಾಯ್ಡ್‌ಗಳು, ಅಂಡಾಶಯದ  ಸಿಸ್ಟುಗಳು,  ಅತಿಯಾದ ಅಥವಾ ಅನಿಯಮಿತ ಮುಟ್ಟಿನ ರಕ್ತಸ್ರಾವ, ಅಥವಾ ಬಂಜೆತನಕ್ಕೆ ಸಂಬಂಧಿಸಿದ ಕಾಳಜಿಗಳಂತಹ ಸ್ತ್ರೀರೋಗ ಸಮಸ್ಯೆಗಳಿರುವ ಮಹಿಳೆಯರು ಲ್ಯಾಪರೊಸ್ಕೋಪಿಕ್ ಕಾರ್ಯವಿಧಾನಗಳಿಂದ ಪ್ರಯೋಜನ ಪಡೆಯಬಹುದು. ಮಹಿಳೆಯರಲ್ಲಿ ಶಾಶ್ವತ ಗರ್ಭನಿರೋಧಕಕ್ಕಾಗಿ ಲ್ಯಾಪರೊಸ್ಕೋಪಿಕ್ ಸಂತಾನಹರಣ ವಿಧಾನಗಳು ಸಹ ಲಭ್ಯವಿರುತ್ತವೆ. ಹರ್ನಿಯಾ, ಪಿತ್ತಕೋಶದ ಕಲ್ಲುಗಳು, ಅಪೆಂಡಿಸೈಟಿಸ್ ಮತ್ತು ಇತರ ಕರುಳಿನ ಅಸ್ವಸ್ಥತೆಗಳಂತಹ ಶಸ್ತ್ರಚಿಕಿತ್ಸಾ ಸಮಸ್ಯೆಗಳಿರುವ ಎಲ್ಲ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆಯಬಹುದು. ಹರ್ನಿಯಾ ಸಾಮಾನ್ಯವಾಗಿ ತೊಡೆಸಂದು ಅಥವಾ ಹೊಟ್ಟೆಯಲ್ಲಿ ಉಬ್ಬಾಗಿ ಕಾಣಿಸಿಕೊಳ್ಳುವುದಲ್ಲದೆ ನಿಂತಾಗ, ತೂಕವನ್ನು ಎತ್ತುವಾಗ ಅಥವಾ ಕೆಮ್ಮುವಾಗ ಹೆಚ್ಚಾಗುತ್ತದೆ.

ಈ ಕಾರ್ಯಕ್ರಮದ ಭಾಗವಾಗಿ ಶಿಬಿರದ ದಿನಗಳಲ್ಲಿ ತಜ್ಞರೊಂದಿಗೆ ಸಮಾಲೋಚನೆ ಉಚಿತವಾಗಿರುತ್ತದೆ. ಅದಲ್ಲದೆ ಹೊರರೋಗಿಯಾಗಿ ಮಾಡುವ ತಪಾಸಣೆಗಳು ಹಾಗೂ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳ ಮೇಲೆ ಆಗಸ್ಟ್ 31, 2025 ರವರೆಗೆ 20% ರಿಯಾಯಿತಿ ದೊರಕುತ್ತದೆ. ಮೇಲೆ ತಿಳಿಸಿದ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ಅಥವಾ ಶಸ್ತ್ರಚಿಕಿತ್ಸೆಗೆ ಅವಶ್ಯಕತೆಯಿದ್ದು ಎರಡನೇ ಅಭಿಪ್ರಾಯವನ್ನು ಪರಿಗಣಿಸುತ್ತಿರುವ ಜನರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಅಥವಾ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು, ದಯವಿಟ್ಟು 7338343777 ಅನ್ನು ಸಂಪರ್ಕಿಸಿ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles