Sunday, March 8, 2026

spot_img

ಉಡುಪಿಯಲ್ಲಿ ಡುಂಡಿರಾಜರ ಹೊಸ ಕವಿತೆಗಳ ವಾಚನ ಕಾರ್ಯಕ್ರಮ..

ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಯೋಜನೆಯಲ್ಲಿ ಹನಿಗವನಗಳ ಖ್ಯಾತ ಕವಿ ಡುಂಡಿರಾಜರ ಹೊಸ ಕವಿತೆಗಳ ವಾಚನ ಕಾರ್ಯಕ್ರಮ ಉಡುಪಿಯ ಬುಡ್ನಾರಿನ ಅಂಶು ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕವಿ ಡುಂಡಿರಾಜರು ಸುಮಾರು ಒಂದು ಗಂಟೆಗಳ ಕಾಲ ತಮ್ಮ ಹೊಸ ಹನಿಗವನಗಳು ಹಾಗೂ ಹೈಕುಗಳನ್ನು ವಾಚಿಸಿ ಸಾಹಿತ್ಯಾಸಕ್ತರ ಮನಸ್ಸು ಮೆಚ್ಚಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಜಿ ಕುರ್ಯ ತಮ್ಮ ಸ್ವರಚಿತ ಹನಿಗವನಗಳನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ., ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್, ಕೋಶಾಧಿಕಾರಿ ರಾಜೇಶ್ ಭಟ್, ಕಸಾಪ ಸದಸ್ಯರಾದ ನಾರಾಯಣ ಮಡಿ, ಭುವನಪ್ರಸಾದ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಂಧ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪೂರ್ಣಿಮಾ ಜನಾರ್ಧನ್ ಧನ್ಯವಾದ ಸಲ್ಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles