ಕೋಟ : ಪಾಂಡೇಶ್ವರ ಪಂಚಾಯತ್ ಸಭಾಂಗಣದಲ್ಲಿ ವೈ ಬಿ ರಾಘವೇಂದ್ರ ಅದ್ಯಕ್ಷತೆಯಲ್ಲಿ ಉಚಿತ ನೇತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ನಡೆಯಿತು. ರೋ ತಿಮ್ಮ ಪೂಜಾರಿ ಉಚಿತ ನೇತ್ರ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟಿಸಿ, ಈ ಇದರ ಪ್ರಯೋಜನ ಪಡಕೊಳ್ಳಬೇಕು ಎಂದು ಕರೆ ನೀಡಿದರು.

ಡಾ ರಾಘವೇಂದ್ರ ರಾವ್, ಡಾ ಯಶಶ್ರೀ, ಡಾ ರಂಜಿತ್, ಶಂಕರ್ ಶೆಟ್ಟಿ ಕಣ್ಣಿನ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ರಮೇಶ್ ರಾವ್ ಉಪಸ್ಥಿತರಿದ್ದರು. ಸುಮಾರು 160 ಮಂದಿ ಪಲಾನುಭವಿಗಳು ಪ್ರಯೋಜನ ಪಡಕೊಂಡರು. ರಜನಿಯವರು ಕಾರ್ಯಕ್ರಮ ನಿರೂಪಿಸಿದರು. ಡಾ ರಾಘವೇಂದ್ರ ರಾವ್ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.



