ಉಡುಪಿ : ಹೆಬ್ರಿ ವರಂಗ ಗ್ರಾಮದಲ್ಲಿ ಇಸ್ಪೀಟ್ ಅಂದರ್ ಬಾಹರ್ ಆಟವಾಡುತ್ತಿದ್ದ 6 ಜನರನ್ನು ಹೆಬ್ರಿ ಪೊಲೀಸ್ ರು ಬಂಧಿಸಿದ್ದಾರೆ. .ಉದಯ ನಾಯ್ಕ, ಶಿವರಾಮ ಶೆಟ್ಟಿ, ಕಿರಣ ನಾಯ್ಕ, ಆನಂದ, ಅಶೋಕ, ಸುರೇಶ ನಾಯ್ಕ ಬಂಧಿತ ಆರೋಪಿಗಳು.

ಹೆಬ್ರಿ ತಾಲೂಕು ವರಂಗ ಗ್ರಾಮದ ಮುನಿಯಾಲು ಬೈಲು ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ಇಸ್ಪೀಟ್ ಜುಗಾರಿ ನಡೆಯುತ್ತದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸ್ ರು ಧಾಳಿನಡೆಸಿದ್ದಾರೆ. ನೆಲದ ಮೇಲೆ ರಟ್ಟು ಹಾಸಿ ಇಸ್ಪೀಟ್ ಅಂದರ್ ಬಾಹರ್ ಆಟದಲ್ಲಿ ಹಣ ಹಾಕಿ ಜುಗಾರಿ ಆಡುತ್ತಿರುವುದನ್ನು ಗಮನಿಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆಟಕ್ಕೆ ಉಪಯೋಗಿಸಿದ ನಗದು ರೂ.3,390 ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿತರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


