ಬೈಂದೂರು : ಬಾರಿ ಮಳೆಗೆ ತುಂಬಿ ಹರಿಯುತ್ತಿರುವ ಸೌಪರ್ಣಿಕ ನದಿ, ಮರವಂತೆ ಗ್ರಾಮ ಪಂಚಾಯತ್ ಮತ್ತು ನಾಡ ಗ್ರಾಮ ಪಂಚಾಯತ್ ಮಧ್ಯಭಾಗದಲ್ಲಿ ಅಗಲ ಕಿರಿದಾಗಿ ಬಹಳ ವೇಗವಾಗಿ ಈ ನದಿ ಹರಿಯುತ್ತದೆ. ಎಂಥವರನ್ನ ಒಮ್ಮೆ ಕಕ್ಕಾಬಿಕ್ಕಿಯಾಗಿಸುವ ನದಿಯ ನೀರಿನ ಸೆಳೆತದ ನಡುವೆ ಒಂಟಿ ಮಹಿಳೆ ತನ್ನ ದೋಣಿಯಲ್ಲಿ ಮನೆಗೆ ತೆರಳುತ್ತಿರುವ ದೃಶ್ಯ. ಇದುಷ್ಯ ನಗರ ಭಾಗದ ಜನರ ಕಲ್ಪನೆಗೂ ನಿಲುಕದ್ದು, ಆದರೆ ನಡು ಪಡುಕೋಣೆ ಎಲ್ಲಿ ವಾಸವಾಗಿರುವ ಜನರಿಗೆ ಇದು ಅನಿವಾರ್ಯ…

ಬೈಂದೂರು ತಾಲೂಕು ವ್ಯಾಪ್ತಿಯ ಮರವಂತೆ ಗ್ರಾಮ ಪಂಚಾಯತ್ ಮತ್ತು ನಾಡ ಗ್ರಾಮ ಪಂಚಾಯತ್ ಮಧ್ಯದಲ್ಲಿ ಬರುವ ಹೆಸರು ಕುರುನಾಡು. ನೋಡು ಪಡುಕೋಣೆ ಎಂದು ಕರೆಯಲ್ಪಡುವ ಈ ಕುದ್ರು ಒಳಗಡೆ ಸರಿಸುಮಾರು ಎಂಟರಿಂದ ಹತ್ತು ಕುಟುಂಬಗಳು ವಾಸವಾಗಿವೆ. ಹತ್ತಾರು ತಲೆಮಾರುಗಳಿಂದ ಕುದ್ರುನಲ್ಲಿ ವಾಸವಾಗಿರುವ ಇಲ್ಲಿನ ಪ್ರತಿ ಮಗುವಿಗೂ ಕೂಡ ದೋಣಿ ನಡೆಸುವುದು ಅನಿವಾರ್ಯ. ಅದರಲ್ಲೂ ಪುರುಷ ಮಹಿಳೆ ಮಕ್ಕಳು ಎನ್ನುವ ಭೇದವಿಲ್ಲದೆ ಏಕಾಂಗಿಯಾಗಿ ದೋಣಿ ನಡೆಸುವುದನ್ನು ಕಲಿತುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಪ್ರತಿ ಮಳೆಗಾಲದಲ್ಲೂ ಸೋಫಾಣಿಕ ನದಿ ಉಕ್ಕಿ ಹರಿದಾಗ ದೈನಂದಿನ ಕೆಲಸ ಕಾರ್ಯಗಳಿಗೆ ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸಲು ದೋಣಿ ಇಲ್ಲಿನ ಮುಖ್ಯ ಸಂಪರ್ಕ ಸಾಧನ. ಅದರಲ್ಲೂ ಕಳೆದ ಹತ್ತು ಹದಿನೈದು ವರ್ಷಗಳಿಂದ ಈ ಪರಿಸರದಲ್ಲಿ ವಿಪರೀತ ನೆರೆಹಾವಳಿ. ಬಂಟ್ವಾಡಿ ಎನ್ನುವ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಕಟ್ಟಲಾಗಿರುವ ಡ್ಯಾಮ್ ನಿಂದಾಗಿ ಇಲ್ಲಿ ಒಮ್ಮೆ ಭಾರಿ ಮಳೆ ಬಂದು ನೆರೆ ಉಂಟಾದರೆ, ನೀರು ಹರಿದು ಇಳಿದು ಹೋಗಲು ಸರಿಸುಮಾರು ಒಂದು ವಾರಗಳ ಕಾಲ ಕಾಯಬೇಕು.

ಕಳೆದ ಕೆಲವು ದಿನಗಳಿಂದ ಬೈಂದೂರು ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಅದರಲ್ಲೂ ಪಶ್ಚಿಮ ಘಟ್ಟದ ಚಪ್ಪಲಿನಿಂದ ಹರಿದು ಬರುವ ಸೌಪರ್ಣಿಕಾ ನದಿಯಂತೂ ಗಟ್ಟದ ಮೇಲಿನ ಮಳೆಯ ನೀರನ್ನು ಕೂಡ ಹೊತ್ತು ತರುವ ಹಿನ್ನೆಲೆಯಲ್ಲಿ ವೇಗವಾಗಿ ಉಕ್ಕಿ ಹರಿಯುತ್ತಿದೆ. ಇಂತಹ ಹರಿವನ್ನು ನೋಡಿದರೆ ಯಾರ ಎದೆಯಾದರೂ ಜಲ್ಲೆನ್ನಬೇಕು. ಆದರೆ ನಡುಪಡುಕೋಣೆ ದ್ವೀಪದ ಮನೆಯಲ್ಲಿರುವ ವಯೋವೃದ್ಧರ ಔಷಧೋಪಚಾರ, ಚಿಕ್ಕ ಮಕ್ಕಳ ಶಿಕ್ಷಣದ ಹಿನ್ನೆಲೆಯಲ್ಲಿ ಇಲ್ಲಿನ ಮಹಿಳೆಯರು ಕೂಡ ದೋಣಿ ನಡೆಸಲು ಕಲಿಯುತ್ತಾರೆ. ಮನೆಯ ಪುರುಷರು ತುತ್ತಿನ ಚೀಲ ತುಂಬವ ಸಲುವಾಗಿ ಕೆಲಸಕ್ಕೆ ತೆರಲೇಬೇಕಾದ ಅನಿವಾರ್ಯತೆ ಇರುವ ಹಿನ್ನೆಲೆಯಲ್ಲಿ ಮಹಿಳೆಯರೇ ಮನೆಯ ಸಂಪೂರ್ಣ ಜವಾಬ್ದಾರಿಗಳನ್ನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ನಡು ಪಡುಕೋಣೆಯಲ್ಲಿ ವಾಸಿಸುವ ಜ್ಯೋತಿ ಅಂತಹ ಮಹಿಳೆಯರು ಎಂತಹ ಮಳೆ ಗಾಳಿ ಗಾಳಿ ಮನೆಯ ಜವಾಬ್ದಾರಿಗಳನ್ನ ನಿರ್ವಹಿಸಲು ದೋಣಿಯನ್ನು ನಡೆಸುತ್ತಾರೆ. ಒಟ್ಟಾರೆಯಾಗಿ ದ್ವೀಪವಾಸಿಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಪ್ರಮುಖವಾಗಿ ದೋಣಿ ಆಧಾರ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಡ್ಯಾಮ್ ನಿಂದಾಗಿ ಈ ಭಾಗದಲ್ಲಿ ಪ್ರತಿವರ್ಷವೂ ಕೂಡ ವಾರಗಳ ಕಾಲ ನೆರೆಹಾವಳಿ ಉಂಟಾಗಿ ಜನಜೀವನ ಸಂಪೂರ್ಣವಾಗಿ ಅಷ್ಟವ್ಯಸ್ತವಾಗುತ್ತಿದೆ. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲೂ ಕೂಡ ಜೀವದ ಹಂಗು ತೊರೆದು ಮನೆಯ ಜವಾಬ್ದಾರಿಗೋಸ್ಕರ ದೋಣಿ ನಡೆಸುವ ಇಂತಹ ಮಹಿಳೆಯರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.
ಪ್ರತಿ ಮಳೆಗಾಲದಲ್ಲಿ ನಾವು ಇದೇ ರೀತಿಯಲ್ಲಿ ದಿನವು ದೋಣಿಯ ಮೂಲಕವೇ ಸಂಚರಿಸಬೇಕಾಗುತ್ತದೆ. ಸೌಪರ್ಣಿಕ ನದಿ ಉಕ್ಕಿ ಹರಿಯುವವಾಗ ನಮ್ಮ ಕುದ್ರು (ದ್ವೀಪ) ವಿನಲ್ಲಿ ನೆರೆ ಬರುತ್ತೆ, ಆ ಸಂದರ್ಭದಲ್ಲಿ ನೆರೆ ಇಳಿಮುಖವಾಗುವ ತನಕ ಜೀವನ ಮಾಡುವುದು ಕಷ್ಟ ಎನಿಸುತ್ತದೆ. ಆದರೂ ಮಕ್ಕಳು ವಯೋವೃದ್ಧರನ್ನು ನೋಡಿಕೊಳ್ಳಬೇಕಾದ ಹಿನ್ನಲೆಯಲ್ಲಿ ಎಂತಹ ಸೆಳೆತವಿರುವ ಸಂದರ್ಭದಲ್ಲೂ ನಾನು ದೋಣಿ ನಡೆಸಿ ದಡಕ್ಕೆ ಬರಲೇಬೇಕಾದ ಅನಿವಾರ್ಯತೆ ಇದೆ.
ಜ್ಯೋತಿ (ನಡುಪಡುಕೋಣೆ ನಿವಾಸಿ)