ಕುಂದಾಪುರ: ರಾತ್ರಿ ವೇಳೆ ರಸ್ತೆ ದಾಟುತ್ತಿರುವ ಅನಾಕೊಂಡ ಮಾದರಿಯ ದೈತ್ಯ ಹೆಬ್ಬಾವಿನ ವಿಡಿಯೋ ವೊಂದು ನೆಟ್ಟಿಗರ ಗಮನಸೆಳೆದಿದೆ.

ಕರಾವಳಿಯಲ್ಲಿ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಮೊನ್ನೆ ಕೆಲವು ಭಾಗದಲ್ಲಿ ಸುರಿದ ಮಳೆಯಿಂದಾಗಿ ಆ ದಿನ ಮಟ್ಟಿಗೆ ಮಳೆ ಬಿದ್ದ ಪ್ರದೇಶದಲ್ಲಿ ಕೊಂಚ ತಂಪಾಯಿತು ಎನ್ನುವುದು ಬಿಟ್ಟರೆ, ಮರುದಿನ ವಾತಾವರಣ ಮತ್ತೆ ಕಾದ ಬಾಣಲಿಯಾಗಿದೆ. ಇಂತಹ ವಾತಾವರಣದಲ್ಲಿ ಮನುಷ್ಯರಾದ ನಾವೇ ಫ್ಯಾನ್, ಎಸಿ, ನೆರಳಿನ ಹುಡುಕಾಟದಲ್ಲಿ ಇರುವಾಗ ಮೂಕ ಪ್ರಾಣಿಗಳು ಸರಿಸೃಪಗಳು ಏನು ಮಾಡುತ್ತವೆ ಹೇಳಿ. ಸಂಜೆ ಬಳಿಕ ವಾತಾವರಣದಲ್ಲಿ ಶಾಖದ ಇಳಿಕೆಯಾದ ಬಳಿಕ ಆಹಾರ ಅರಸುತ್ತಾ ತೆರಳುತ್ತಿವೆ. ಇಂತಹದೆ ಸನ್ನಿವೇಶ ಆನಗಳ್ಳಿ ಕುಂದಾಪುರ ಚಿಕ್ಕಮ್ಮ ದೇವಸ್ಥಾನದ ಮುಂಭಾಗದ ಬ್ರಿಜ್ ರಸ್ತೆಯಲ್ಲಿ ಕಂಡು ಬಂದಿದೆ.

ಬೃಹತ್ ಗಾತ್ರದ ಹೆಬ್ಬಾವೊಂದು ರಾತ್ರಿಯ ತಂಪಿನಲ್ಲಿ ಆಹಾರ ಅರಸಿ ರಸ್ತೆ ದಾಟುತ್ತಿರುವ ದೃಶ್ಯ ಸ್ಥಳೀಯರೋರ್ವರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಹೆಬ್ಬಾವಿನ ರಾತ್ರಿ ಸಂಚಾರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…