ಉಡುಪಿ : ಹೈನುಗಾರಿಕೆಯನ್ನು ನಂಬಿಕೊಂಡವರಿಗೆ ತಾವು ಸಾಕಿದ ಹಸು ಕರು ಹಾಕಿದಾಗ ಆಗುವ ಸಂಭ್ರಮ ಹೇಳ ತೀರದು. ಆದರೆ ಇಲ್ಲಿ ಆ ಸಂತೋಷ ಇಮ್ಮಡಿಯಾಗಿದೆ ಎನ್ನಲಡ್ಡಿಲ್ಲಾ, ಯಾಕೆಂದ್ರೆ ಒಂದೆ ಬಾರಿ ಅವಳಿ ಕರುಗಳಿಗೆ ಜನ್ಮ ನೀಡುವ ಮೂಲಕ ಈ ಹಸು ಮನೆಯವರಿಗೆ ಸಂತೋಷ ಇಮ್ಮಡಿಯಾಗಿಸಿದೆ.

ಕುಂಜಾರುಗಿರಿಯ ಪಾಜೈ ಎಂಬಲ್ಲಿ, ಕೃಷಿಕರೂ ಹಾಗೂ ಅಡುಗೆ ವೃತ್ತಿ ಮಾಡುತ್ತಿರುವ ಬಾಲಕೃಷ್ಣ ಭಟ್ ಇವರ ಮನೆಯ ದನವು ಅವಳಿ ಕರುಗಳನ್ನು ಹಾಕಿ ಸಂಭ್ರಮ ಮೂಡಿಸಿದೆ.

ಒಂದು ಹೆಣ್ಣು ಕರು ಒಂದು ಗಂಡು ಕರು ಆಗಿದ್ದು ಆರೋಗ್ಯವಾಗಿದ್ದು, ಮನೆಯವರ ಸಂತೋಷಕ್ಕೆ ಕಾರಣವಾಗಿದೆ.