Monday, March 2, 2026

spot_img

ಅಲೆವೂರಿನಲ್ಲಿ ಶೀರೂರು ಶ್ರೀಗಳಿಗೆ ಹುಟ್ಟೂರ ಸನ್ಮಾನ..

ಉಡುಪಿ : ಅಲೆವೂರು ಗುಡ್ಡೆ ಅಂಗಡಿ ಕಟ್ಟೆ ಗಣಪತಿ ಸನ್ನಿಧಿಯಲ್ಲಿ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಹುಟ್ಟೂರ ಸನ್ಮಾನ ನಡೆಯಿತು. ಅಲೆವೂರಿಗೆ ಆಗಮಿಸಿದ ಶ್ರೀಗಳಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಭವ್ಯ ಸ್ವಾಗತ ಕೋರಿತು.

 ಶೀರೂರು ಮಠಾಧೀಶರಾದ ಲಕ್ಷ್ಮೀವರ ತೀರ್ಥರಿಗೆ ಅತ್ಯಂತ ಪ್ರಿಯವಾದ ತಾಣವಾಗಿರುವ ಅಲೆವೂರಿನಲ್ಲಿ, ಶೀರೂರು ಪರ್ಯಾಯದ ವಿಶೇಷ ಸಂಭ್ರಮ ಮೂಡಿಬಂದಿತು. ಕಟ್ಟೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳು ಆರತಿ ಬೆಳಗಿದರು. ಬಳಿಕ ಸಮಿತಿ ಹಾಗೂ ಊರ ನಾಗರಿಕರ ಪರವಾಗಿ ಗೌರವಪೂರ್ಣ ಅಭಿನಂದನೆ ಸಲ್ಲಿಸಲಾಯಿತು.

ಸಂಕಲ್ಪ ಸಭಾಂಗಣದಿಂದ ಅಲೆವೂರು ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಭಜನಾ ತಂಡಗಳು, ಕೊಂಬು–ಚೆಂಡೆ, ಬ್ಯಾಂಡ್ ಹಾಗೂ ವೇಷಭೂಷಣಗಳೊಂದಿಗೆ ರಜತ ವಾಹನದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆ ಬಳಿಕ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಮರನಾಥ್ ಶೆಟ್ಟಿ ಸೇರಿದಂತೆ ಊರ ನಾಗರಿಕರು ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles