ಉಡುಪಿ: ಸಹಜವಾಗಿ ದನಗಳಿಗೆ ನಾಲ್ಕು ಕೆಚ್ಚಲುಗಳು ಇರುವುದೇ ಸಾಮಾನ್ಯ. ಆದರೆ ಉಡುಪಿ ಜಿಲ್ಲೆಯ ಪರ್ಕಳದ ಅಚ್ಯುತ ನಗರದಲ್ಲಿ ಅಪರೂಪದ ಐದು ಕೆಚ್ಚಲಿನ ದನೊಂದು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಅಚ್ಯುತ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೆ.ಆರ್. ಅಶೋಕ್ ಅವರು ಕಳೆದ ಸುಮಾರು ೧೪ ವರ್ಷಗಳಿಂದ ಬೀಡಾಡಿ ದನಗಳಿಗೆ ಆಹಾರ ನೀಡುವ ಸೇವೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಪ್ರತಿದಿನವೂ ಹಲವು ದನಗಳು ಅವರ ಮನೆಗೆ ಬಂದು ಆಹಾರ ಸೇವಿಸುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿದೆ.


ಇತ್ತೀಚೆಗೆ ನಾಲ್ಕು ದಿನಗಳ ಹಿಂದೆ ಕರು ಹಾಕಿದ ದನದ ಕೆಚ್ಚಲುಗಳನ್ನು ಗಮನಿಸಿದಾಗ, ಅದರಲ್ಲಿ ಐದು ಕೆಚ್ಚಲುಗಳಿರುವುದು ಕಂಡುಬಂದಿದೆ. ಇದು ಬಲು ಅಪರೂಪದ ಸಂಗತಿಯಾಗಿದೆ. ಈ ದನ ಇತ್ತೀಚೆಗೆ ಕರು ಹಾಕಿದ್ದು, ಕರು ಹಾಲು ಕುಡಿಯುವ ವೇಳೆ ಐದು ಕೆಚ್ಚಲುಗಳಿರುವುದು ಸ್ಪಷ್ಟವಾಗಿ ಗಮನಕ್ಕೆ ಬಂದಿದೆ. ಈ ಅಪರೂಪದ ದನವನ್ನು ನೋಡಲು ಸ್ಥಳೀಯರು ಆಗಮಿಸುತ್ತಿದ್ದು, ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಈ ವಿಷಯವನ್ನು ಹಂಚಿಕೊಂಡಿದ್ದಾರೆ.



