ಉಡುಪಿ : ಪಣಂಬೂರಿನ ನಂದನೇಶ್ವರ ದೇವಳದ ಮೊಕ್ತೇಸರರಾಗಿ ಕಾರ್ಯನಿರ್ವಹಿಸಿದ್ದ ಪಣಂಬೂರಿನ ಟಿ. ಪಿ. ಕೇಶವನ್ ಇವರ ಧರ್ಮಪತ್ನಿ ಶ್ರೀಮತಿ ಅನುರಾಧ ಕೆ. (೮೪) ಸುರತ್ಕಲ್‌ನ ನಿವಾಸದಲ್ಲಿ ನಿಧನ ಹೊಂದಿದರು. ಇವರು ಸುರತ್ಕಲ್‌ನ ಹಿಂದೂ ವಿದ್ಯಾದಾಯಿನೀ ಸಂಘ ಹಾಗೂ ಪಣಂಬೂರು ರೋಟರಿ ಕ್ಲಬ್‌ನ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು. ನಂದನೇಶ್ವರ ದೇವಳದಲ್ಲಿ ತಮ್ಮ ಪತಿಯೊಂದಿಗೆ ಕಾರ್ಯಕರ್ತೆಯಾಗಿ ಶ್ರಮಿಸಿ ಎಲ್ಲರ
ಪ್ರೀತಿಪಾತ್ರರಾಗಿದ್ದರು. ಕಲಾರಾಧಕರಾದ ಅಮೇರಿಕಾ ನಿವಾಸಿ, ಪಣಂಬೂರು ಮೀನಾಕ್ಷೀ ವಾಸುದೇವ ಐತಾಳ್ ಸಹಿತ ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.