ಉಡುಪಿ: ವರ್ಕ್ ಫ್ರಮ್ ಹೋಮ್ ಆಸೆ ತೋರಿಸಿ ಹೂಡಿಕೆ ಮಾಡಲು ಹೇಳಿ ಮಹಿಳೆಯೋರ್ವರಿಗೆ ವಂಚಿಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಗುಣ ಎನ್ನುವ ಮಹಿಳಗೆ ವರ್ಕ್ ಫ್ರಾಮ್ ಹೋಮ್ ಎಂಬ ಹೆಸರಿನಲ್ಲಿ ಹಣ ಹೂಡಿದ್ದಲ್ಲಿ ಹೆಚ್ಚಿನ ಲಾಭ ಬರುವ ಜಾಹಿರಾತನ್ನು ಸೈಬರ್ ಅಪರಾಧಿಗಳು ಕಳುಹಿಸಿದ್ದರು. ಜಾಹಿರಾತು ನೋಡಿ ಮರುಳಾಗಿ ಸುಗುಣ ಅವರು, ಮಾ.5ರಿಂದ ಮಾ.22ರ ಮಧ್ಯಾವಧಿಯಲ್ಲಿ ಬ್ಯಾಂಕ್ ಖಾತೆಯಿಂದ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 3,92,250ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಸದ್ಯ ಯಾವುದೇ ಹೂಡಿಕೆ ಹಣ ಮರಳಿ ನೀಡದೆ ಮೋಸ ಹೋಗಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.