ಅಜಿತ್ ಪವಾರ್ ರವರ ವಿಮಾನ ಅಪಘಾತ/ದುರ್ಮರಣ ವನ್ನು ಸಂಖ್ಯಾಶಾಸ್ತ್ರ ದೃಷ್ಟಿಯಿಂದ ನೋಡೋಣ . .ಸಂಖ್ಯೆಗಳು ಏನು ಹೇಳುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ . . ಅವರ ಜನ್ಮದಿನ 22-july-1959, ಅಂದರೆ ಅವರ ಮೂಲಾಂಕ ನಾಲ್ಕು (ರಾಹು) ಹಾಗು ಭಾಗ್ಯಾಂಕ ಎಂಟು (ಶನಿ ) ಇಂತಹ ಕಾಂಬಿನೇಶನ್ ಇರುವವರು ಬಹಳ ಶಿಸ್ತಿನ ಹಾಗು ವಕೀಲರಂತಹ ವಾಕ್ ಚತುರತೆ ಇರುತ್ತದೆ . . ಇವರು ಸಾಮಾನ್ಯವಾಗಿ ಸರಕಾರೀ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಪದವಿಯಲ್ಲಿರುತ್ತಾರೆ . . ಇದೆಲ್ಲವೂ ಶನಿಯ ಕೊಡುಗೆ . . ಕಟು ನಿರ್ಧಾರ ಹಾಗು ಮೊನಚು ಮಾತು ಇವರ ಆಯುಧ,, ಮಾತುಗಳು ಸೌಮ್ಯವಾಗಿದ್ದರೂ ತೂಕದಿಂದ ಕೂಡಿರುತ್ತವೆ . .

ಇವರ ಜನ್ಮದಿನವನ್ನು ಗಮನಿಸಿ ಅದರಲ್ಲಿ ನಾಲ್ಕು , ಆರು , ಮತ್ತು ಮೂರು ನೇರವಾಗಿ ಸಿಗುತ್ತಿಲ್ಲ . . ಅಂದರೆ ಆ ಏರಿಯಾದಲ್ಲೇ ಅವರ ವೀಕ್ನೆಸ್ ಇರುತ್ತೆ . . ಅಂದರೆ ರಾಹು , ಗುರು ಮತ್ತು ಶುಕ್ರ . . ಈಗ ಅಪಘಾತವಾದ ವರ್ಷದ ಎನರ್ಜಿ ಏನಿತ್ತು ಅಂತ ನೋಡೋಣ . . 28-jan-2026 ರಂದು ಅಪಘಾತ ನಡೆಯಿತು! ಈ ವರ್ಷ ಇವರ ಪರ್ಸನಲ್ ಇಯರ್ ಮೂರು ಅಂದರೆ ವೇದಿಕ್ ನಲ್ಲಿ ಗುರು ಭುಕ್ತಿ ಅಂತ ಇಟ್ಟುಕೊಳ್ಳೋಣ . . ಆ ಮೂರರ ಎನರ್ಜಿಯನ್ನು ಸರಿತೂಗಿಸಲು ಇವರ ಚಾರ್ಟಲ್ಲಿ ಮೂರು ಇಲ್ಲ ! ಹಾಗೆ ವರ್ಷದ ಸಂಖ್ಯೆಯಲ್ಲಿ ಬರುವ ಆರು ಅಂದರೆ ಶುಕ್ರ ಲಕ್ಸುರಿಕಾರಕ ವಿಮಾನಯಾನ ಕೂಡ ಇದರ ಪರಿಧಿಯೊಳಗೆ ಬರುತ್ತೆ . . ಶುಕ್ರನ ಎನೆರ್ಜಿಯನ್ನು ಹ್ಯಾಂಡಲ್ ಮಾಡುವ ಶಕ್ತಿ ಕೂಡ ಇವರ ಚಾರ್ಟ್ ನಲ್ಲಿಲ್ಲ ಅದಕ್ಕೆ ಯಾವುದೇ ಪರಿಹಾರವನ್ನು ಕೂಡ ಮಾಡಿದಂತೆ ಅನಿಸುವುದಿಲ್ಲ..

ಜೊತೆಗೆ ಜನವರಿ ತಿಂಗಳ ಲಾರ್ಡ್ (ಲಾರ್ಡ್ ಆ ದಿ ಮಂತ್ ) ರಾಹು ಈ ಮೂರೂ ಗ್ರಹಗಳನ್ನು ಹ್ಯಾಂಡಲ್ ಮಾಡುವ ಸಾಮರ್ಥ್ಯ ಚಾರ್ಟ್ ನಲ್ಲಿಲ್ಲ ಆ ಮೂರೂ ಗ್ರಹಗಳು ಚಾರ್ಟ್ನಲ್ಲಿಲ್ಲದಿದ್ದು ತಮ್ಮ ಋಣಾತ್ಮಕ ಪರಿಣಾಮವನ್ನು ಬೀರಿವೆ ! ಪರಿಣಾಮ ಎಲ್ಲರ ಮುಂದಿದೆ . . ಮೂಲತಃ ಇವರ ಮೂಲಾಂಕ ಮತ್ತು ಭಾಗ್ಯಾಂಕವೇ ಇವರ ಬದುಕು ಹೋರಾಟ ಸಂಘರ್ಷಗಳ ಮೂಲಕ ಬಂದ ಹಾದಿಯನ್ನು ತೋರಿಸುತ್ತದೆ . . ಅದರಲ್ಲೂ ಶುಕ್ರನ ಅನುಗ್ರಹವಿಲ್ಲದಿದ್ದಲ್ಲಿ ಸುಲಭವಾಗಿ ಐಷಾರಾಮಿ ವಸ್ತುಗಳನ್ನು ಅನುಭವಿಸಲು , ಸಾಂಸಾರಿಕ ಸುಖ ಭೋಗಗಳನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ ವೇದಿಕ್ ಜ್ಯೋತಿಷ್ಯದಲ್ಲಿ ಇದನ್ನು ದೇವಿ ಕೋಪ/ಶಾಪ ಅಂತ ಲೇಬಲ್ ಮಾಡುತ್ತಾರೆ . .

ಕಳೆದ ವರ್ಷವೇ (2025) ಅವರ ಪರ್ಸನಲ್ ಇಯರ್ 2 ಇದ್ದು ವರ್ಷದ ಟೋಟಲ್ ಕೂಡ 9 (2+0+2+5=9) ಅಲ್ಲೇ ಕುಜ ಮತ್ತು ಚಂದ್ರರಿಂದ ಈ ಅವಘಡ ನಡೆಯುವ ಸೂಚನೆಯಿದ್ದರೂ ವರ್ಷದ ಸಂಖ್ಯೆಯಲ್ಲಿ ಬುಧ (5) ಇದ್ದು ಇವರನ್ನು ಆ ವರ್ಷ ಮುಗಿಯುವ ವರೆಗೆ ಉಳಿಸಿಕೊಂಡಿದೆ . . ಅದೇ 2026 ರಲ್ಲಿ ಬುಧನ ಅನುಗ್ರಹ ಸಿಗದೇ ಜೊತೆಗೆ ಶುಕ್ರನ ಋಣಾತ್ಮಕ ಪರಿಣಾಮವೂ ಸೇರಿ ಶುಕ್ರನ ಡೊಮೇನ್ ಆದ ವಿಮಾನಯಾನದಲ್ಲೇ ಆಯಸ್ಸು ಅಂತ್ಯಗೊಂಡಿದೆ . .

ಯಾವುದೇ ಗ್ರಹಗಳು ಎಲ್ಲಿ ಯಾವ ರಾಶಿಯಲ್ಲಿದ್ದರೂ ಕೂಡ ಹೆದರಬೇಕಿಲ್ಲ ಎಲ್ಲವು ನಮ್ಮ ಕರ್ಮ ಫಲದಿಂದಲೇ ಸಿಗುವಂತದ್ದು ಅದಕ್ಕೆ ದೊಡ್ಡ ಪರಿಹಾರವೆಂದರೆ “ಶರಣಾಗತಿ” ಮನಸಾರೆ ದೈವಿಕ ಶಕ್ತಿಗಳಿಗೆ (ಯೂನಿವರ್ಸ್) ಶರಣಾಗಿ ಸಿಟ್ಟು ಅಹಂಕಾರಗಳನ್ನು ತ್ಯಜಿಸಿ . . ಸೇವಾಮನೋಭಾವ/ಸಹಕಾರ ಮನೋಭಾವದಿಂದ ಜೀವಿಸುವ ಪಣ ತೊಟ್ಟಾಗಲೇ ಪರಿಸ್ಥಿತಿಯು ಬದಲಾಗುತ್ತಾ ಹೋಗುವುದು . . ಸಿಟ್ಟು , ಅಹಂಕಾರ , ದ್ವೇಷ ಇವುಗಳೇ ಮನುಜನ ಸಾಧನೆಗೆ/ಏಳಿಗೆಗೆ ಬಹುದೊಡ್ಡ ತಡೆಯೊಡ್ಡುವ ರಾಕ್ಷಸರು.. ನಿಮ್ಮ ಜನ್ಮದಿನಾಂಕದ ಬಗ್ಗೆ ತಿಳಿಯಬೇಕಿದ್ದಲ್ಲಿ ಈ ನಂಬರ್ ಗೆ ವಾಟ್ಸಾಪ್ ಮಾಡಿ.. ಒಂದು ಸಣ್ಣ ಕಾಣಿಕೆಯೊಂದಿಗೆ ನಿಮ್ಮ ಜನ್ಮದಿನದ ವೀಕ್ನೆಸ್ಸ್ ಮತ್ತು ಸ್ಟ್ರೆಂಗ್ತ್ ಇತ್ಯಾದಿ ತಿಳಿದುಕೊಳ್ಳಬಹುದು . .
———————————————————–
Dinesh holla, Numerology, Astrology – Saligrama
Contact: 95919 06335
Decode * Transform * Prosper
————————————————————–



