ಕೋಟ : ಇತ್ತೀಚಿಗೆ ಅಪಘಾತದಲ್ಲಿ ಮೃತಪಟ್ಟ ಶಿಕ್ಷಕ, ಸಾಂಸ್ಕ್ರತಿಕ ಸಂಘಟಕ, ಕೋಟ ದಸಂಸ ಕಾರ್ಯಕರ್ತ ಸಂತೋಷ್ ಪಡುಕರೆ ಯವರಿಗೆ ಇಂದು ಕೋಟ ಹೋಬಳಿ ಶಾಖೆಯ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ಸಭೆಯಲ್ಲಿ ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಉಪನ್ಯಾಸಕ ಸಂಜೀವ ಸಿ ಗುಂಡ್ಮಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಶಾಮಸುಂದರ್ ತೆಕ್ಕಟ್ಟೆ, ಸುರೇಶ್ ಹಕ್ಲಾಡಿ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಕೋಟ ಹೋಬಳಿ ಶಾಖೆ ಸಂಚಾಲಕ ನಾಗರಾಜ ಪಡುಕರೆ, ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ, ಬ್ರಹ್ಮಾವರ ತಾಲೂಕು ಸಂಘಟನಾ ಸಂಚಾಲಕ ವಿಜಯ ಗಿಳಿಯಾರು, ಕೋಟ ಹೋಬಳಿ ಶಾಖೆಯ ನಾಗೇಶ್ ಪಡುಕರೆ, ಸಕೇಶ್ ಬನ್ನಾಡಿ, ಮಹೇಶ್ ಕಾರ್ಕಡ, ಐತ ಕಾರ್ಕಡ, ಕೃಷ್ಣ ಪಿ.ಎಂ.ಇಂಡಿಕಾ ಕಲಾ ಬಳಗದ ಅಧ್ಯಕ್ಷ ಮಣೂರು ಜಯರಾಮ ಶೆಟ್ಟಿ, ಗಾಯಕ ರವಿ ಬನ್ನಾಡಿ ಉಪಸ್ಥಿತರಿದ್ದರು.

ಪ್ರಭಾಕರ ಮಣೂರು ಕಾರ್ಯಕ್ರಮ ನಿರೂಪಿಸಿದರು.