ಉಡುಪಿ : ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಮರಳು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸ್ ರು ವಶಕ್ಕೆ ಪಡೆದ ಘಟನೆ ಮಲ್ಪೆಯಲ್ಲಿ ನಡೆದಿದೆ. ಕೊಡವೂರು ಗ್ರಾಮದ ಮಲ್ಪೆ ತೊಟ್ಟಂ ರಸ್ತೆಯಲ್ಲಿರುವ ಸ್ಕಂದ ಲಾಡ್ಜ್ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ, ಆರೋಪಿ ಸುಹೇಬ್ ಹೂಡೆ ಕಡೆಯಿಂದ ಮಲ್ಪೆ ಕಡೆಗೆ ಅನುಮಾನಾಸ್ಪದವಾಗಿ ಮಾಹನ ಚಲಾಯಿಸಿಕೊಂಡು ಬಂದ ಹಿನ್ನಲೆಯಲ್ಲಿ ಪೊಲೀಸ್ ರು ವಾಹನ ಪರಿಶೀಲಿಸಿದ್ದಾರೆ. ವಾಹನದಲ್ಲಿ ಯಾವುದೇ ದಾಖಲಾತಿ ಇಲ್ಲದ ಸುಮಾರು ಅರ್ಧ ಯುನಿಟ್ ನಷ್ಟು ಮರಳು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ 2 ಸಾವಿರ ಮೌಲ್ಯದ ಸುಮಾರು ½ ಯುನಿಟ್ ನಷ್ಟು ಮರಳು ಮತ್ತು ಮರಳು ಸಾಗಾಟ ಮಾಡುತ್ತಿದ್ದ ಮಹೀಂದ್ರಾ ಜಿತೋ ವಾಹನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.