ಕುಂದಾಪುರ : ಪಂಚಗಂಗಾವಳಿ ನದಿಯಲ್ಲಿ ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಮರಳು ತೆಗೆಯುತ್ತಿದ್ದ ಆರೋಪಿಯನ್ನು ಕುಂದಾಪುರ ಪೊಲೀಸ್ ರು ಬಂಧಿಸಿದ್ದಾರೆ. ಬಂಧಿತನನ್ನು ಉದಯ ಮೆಂಡನ್ ಎಂದು ಗುರುತಿಸಲಾಗಿದ್ದು, ಇನ್ನೋರ್ವ ಆರೋಪಿ ಸುನೀಲ್ ಧಾಳಿಯ ವೇಳೆ ತಪ್ಪಿಸಿಕೊಂಡಿದ್ದಾನೆ.

ಕುಂದಾಪುರ ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪ ಪಂಚಗಂಗಾವಳಿ ಹೊಳೆಯಲ್ಲಿ ಕೆಲವು ಜನರು ಮರಳನ್ನು ತೆಗೆದು ದೋಣಿಯಲ್ಲಿ ತುಂಬಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್ ರು ಧಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಯಾವುದೇ ಪರವಾನಿಗೆ ಇಲ್ಲದೇ ಪಂಚಗಂಗಾವಳಿ ಹೊಳೆಯಿಂದ ಮರಳನ್ನು ಕಳವು ಮಾಡಿ ಸಾಗಾಟ ಮಾಡಲು ಶೇಖರಿಸಿದ್ದು ಧಾಳಿ ವೇಳೆ ಪತ್ತೆಯಾಗಿದೆ.

ಇನ್ನು ಕಳ್ಳತನಕ್ಕೆ ಬಳಸಿದ್ದ 15 ಸಾವಿರ ಮೌಲ್ಯದ ಫೈಬರ್ ದೋಣಿ-1, 5ಸಾವಿರ ಮೌಲ್ಯದ 1 ½ ಯುನಿಟ್ ಮರಳು, 407 ಟಿಪ್ಪರ್ ವಾಹನ ಮತ್ತು ಮರಳು ತೆಗೆಯಲು ಬಳಸುವ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 66/2025 ಕಲಂ: 303(2), 112 BNS & ಕಲಂ: 4, 4(1) (a), 21 Mines and minerals Regulation of development act ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


